ದೋಹಾ: ಕರೆನ್ಸಿ ಮತ್ತು ಚಿನ್ನಾಭರಣಗಳಂತಹ ದುಬಾರಿ ವಸ್ತುಗಳನ್ನು ದೇಶಕ್ಕೆ ತರುವುದು ಮತ್ತು ದೇಶದಿಂದ ಸಾಗಿಸುವುದಕ್ಕೆ ಖತರ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಐವತ್ತು ಸಾವಿರ ಖತರ್ ರಿಯಾಲ್ ಮೌಲ್ಯದ ಸರಕುಗಳನ್ನು ಯಾವುದೇ ಮಾರ್ಗದಿಂದ ಸಾಗಿಸುವವರಾದರೂ ಕೂಡ ಕಸ್ಟಮ್ಸ್ ಇಲಾಖೆಯ ವಿಶೇಷ ಸರಕು ಅಫಿಡವಿಟ್ ಅನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.
ಕಪ್ಪುಹಣವನ್ನು ಸಕ್ರಮಗೊಳಿಸುವುದು ಮತ್ತು ಭಯೋತ್ಪಾದಕರಿಗೆ ಹಣಕಾಸು ಸಹಾಯ ನೀಡುವುದನ್ನು ನಿಗ್ರಹಿಸಲು ಖತರ್ ಜಾರಿಗೊಳಿಸಿದ ಹೊಸ ಕಾನೂನನ್ನು ಆಧರಿಸಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ.
ವಾಯು, ಸಮುದ್ರ ಅಥವಾ ಭೂಮಿ ಮಾರ್ಗ ಮೂಲಕ ಐವತ್ತು ಸಾವಿರ ರಿಯಾಲ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸರಕುಗಳನ್ನು ದೇಶಕ್ಕೆ ಅಥವಾ ದೇಶದಿಂದ ಹೊರಗೆ ತರಬೇಕಾದರೆ ಇನ್ನು ಮುಂದೆ, ಅಫಿಡವಿಟ್ ಅನ್ನು ಭರ್ತಿ ಮಾಡಬೇಕು. ಪ್ರಶ್ನಾವಳಿಯು, ಈ ವಸ್ತುಗಳನ್ನು ಹೇಗೆ ಪಡೆಯಲಾಗಿದೆ, ಅವುಗಳನ್ನು ಏಕೆ ಸಾಗಿಸಲಾಗುತ್ತದೆ ಮುಂತಾದ ಎಲ್ಲಾ ಪ್ರಶ್ನೆಗಳನ್ನು ಒಳಗೊಂಡಿದೆ.
ಅಫಿಡವಿಟ್ ಅನ್ನು ಪರಿಶೀಲಿಸಿ, ಮತ್ತು ದೃಢೀಕರಿಸಿದ ಬಳಿಕ ಮಾತ್ರ ಅಂತಹ ವಹಿವಾಟುಗಳನ್ನು ಅನುಮತಿಸಲಾಗುತ್ತದೆ. ಹೊಸ ನಿಯಮವು ಎಲ್ಲಾ ಕರೆನ್ಸಿಗಳು, ಚಿನ್ನ, ಬೆಳ್ಳಿ, ವಜ್ರಗಳು, ಆಭರಣಗಳು, ನಗದು ಚೆಕ್‌ಗಳಿಗೂ ಅನ್ವಯಿಸುತ್ತದೆ.
ಸುಳ್ಳು ಮಾಹಿತಿ ನೀಡುವುದು ಅಥವಾ ಅಫಿಡವಿಟ್‌ನ ಕೆಲವು ಭಾಗಗಳನ್ನು ಭರ್ತಿ ಮಾಡದಿದ್ದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮತ್ತು ಒಂದು ಲಕ್ಷ ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ