ರಿಯಾದ್: ಕೋಮುವಾದ ಮತ್ತು ಉಗ್ರವಾದಿಗಳಿಗೆ ಸೌದಿ ಅರೇಬಿಯಾದಲ್ಲಿ ಕಠಿಣ ಶಿಕ್ಷೆ ಕಾದಿದೆ. ಅಂತಹವರ ಬಗ್ಗೆ ತಿಳಿದುಬಂದಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು 990ಗೆ ಡಯಲ್ ಮಾಡಿ. ಪೊಲೀಸರು ಬಂದು ಅಂತಹವರನ್ನು ಬಂದಿಸಲಿದ್ದಾರೆ. ಈ ಕೋಮುವಾದಿಗಳು ಮತ್ತು ಉಗ್ರಗಾಮಿಗಳಿಗೆ ಪೊಲೀಸರು ಅಪರಾಧಿಗಳಿಗೆ ನೀಡುವ ಅದೇ ಶಿಕ್ಷೆಯನ್ನು ನೀಡಲಿದ್ದಾರೆ.
ಇದು ಸ್ವದೇಶಿಯರಿಗೆ ಮಾತ್ರವಲ್ಲ, ಸೌದಿ ಅರೇಬಿಯಾದಲ್ಲಿರುವ ವಿದೇಶಿಯರಿಗೂ ಅನ್ವಯಿಸುತ್ತದೆ. ವಿವಿಧ ರೀತಿಯ ಅಪರಾಧಿಗಳು, ಉಗ್ರವಾದಿ ಮತ್ತು ಕೋಮುವಾದಿಗಳ ಬಗ್ಗೆ ಮಾಹಿತಿ ನೀಡಲಿಕ್ಕಾಗಿ ವಿದೇಶಿಯರು ಮತ್ತು ಸ್ವದೇಶೀಯರು 990 ಗೆ ಕರೆ ಮಾಡಬಹುದು ಎಂದು ದೇಶದ ಭದ್ರತಾ ಇಲಾಖೆ ನಿನ್ನೆ ತಿಳಿಸಿದೆ.
ಶಂಕಿತ ಉಗ್ರರು, ಅಪರಾಧಿಗಳು ಅಥವಾ ಕೋಮುವಾದಿ ಚಿಂತನೆ ಇರುವವರ ಬಗ್ಗೆ ಯಾರೂ ಬೇಕಾದರೂ ಮಾಹಿತಿ ನೀಡಬಹುದು. 24 ಗಂಟೆಗಳ ಕಾಲ ಕಾರ್ಯಾಚರಿಸುವ ಕೇಂದ್ರವು ಮಾಹಿತಿದಾರರ ಬಗೆಗಿನ ಮಾಹಿತಿಯನ್ನು ಗೌಪ್ಯವಾಗಿಡಲಿದೆ. ವಿವರಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ದೃಢಪಡಿಸಲಾಗುವುದು.
ರಿಯಾದ್ ಸೀಸನ್ ಮತ್ತು ದರಿಯಾ ಋತುವಿನಲ್ಲಿ ಸಾರ್ವಜನಿಕ ಭದ್ರತಾ ಇಲಾಖೆಯ ವತಿಯಿಂದ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ದೇಶದೊಳಗಿನ ಮಾಹಿತಿದಾರರು 990 ಸಂಖ್ಯೆಗೆ ಮತ್ತು ವಿದೇಶಗಳಿಂದ 00966112455922 ಸಂಖ್ಯೆಗೆ ಮಾಹಿತಿ ನೀಡಬಹುದು. ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಕೆಲವು ಭಾರತೀಯ ವಲಸಿಗರು ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಹರಡಿ ಬಂದನಕ್ಕೊಳಗಾಗಿದ್ದರು.
ಜುಬೈಲ್‌ನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಕರ್ನಾಟಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆತನ ಬಂಧನದ ಬಗ್ಗೆ ಖಚಿತತೆ ದೊರೆತಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿತು. ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧಿಸುವವರು ಪರಸ್ಪರ ದ್ವೇಷದ ಪೋಸ್ಟ್‌ಗಳನ್ನು ಹರಡುತ್ತಿದ್ದಾರೆ. ಈ ಬಗೆಗಿನ ದೂರುಗಳಿಂದಾಗಿ ಕೋಮುವಾದಿಗಳು ಮತ್ತು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ