ರಿಯಾದ್: ಪ್ಯಾನ್ ಕಾರ್ಡ್ಗಳನ್ನು ಹೊಂದಿರುವ ವಲಸಿಗರು ತಮ್ಮ ಆಧಾರ್ ಜೋಡಣೆಯ ಸಮಯವನ್ನು ವಿಸ್ತರಿಸುವಂತೆ ವಿವಿಧ ವಲಸಿಗ ಗುಂಪುಗಳು ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿವೆ.
ಗಡುವು ಈಗ ಡಿ.31 ಆಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಇತ್ತೀಚೆಗೆ ಮಾಡಿದ ಪ್ರಕಟಣೆಯು ವಲಸಿಗರಿಗೆ ಆತಂಕ ಉಂಟುಮಾಡಿದೆ. ವಲಸಿಗರಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕಡ್ಡಾಯವಲ್ಲ ಎಂದು ಸರಕಾರ ಸ್ಪಷ್ಟಪಡಿಸಿದ್ದರೂ ಪ್ಯಾನ್ ಕಾರ್ಡ್ ಹೊಂದಿರುವ ವಲಸಿಗರು ಡಿ.31ರ ಮುಂಚಿತವಾಗಿ ಆಧಾರ್ಗೆ ಸಂಪರ್ಕ ಕಲ್ಪಿಸಬೇಕು ಎಂದು ಸ್ಪಷ್ಟಪಡಿಸಿದೆ.
ಇಲ್ಲದಿದ್ದರೆ ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಅನ್ನು ಅಸಮರ್ಥಗೊಳಿಸಲಾಗುತ್ತದೆ. ಇದು ದೇಶಕ್ಕೆ ಕಳುಹಿಸಲಾಗುವ ಹಣದ ವ್ಯವಹಾರದ ಮೇಲೆ ಪರಿಣಾಮ ಬೀರಲಿರುವ ಕಾರಣ ಈ ವಿಷಯದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಬೇಕೆಂದು ಪ್ರವಾಸಿ ಬಂದು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಕೆ.ವಿ.ಶಂಸುದ್ದೀನ್ ಒತ್ತಾಯಿಸಿದ್ದಾರೆ. ಈಗಾಗಲೇ ಬೇಡಿಕೆ ಸಲ್ಲಿಸಲಾಗಿದ್ದರೂ, ಲಿಖಿತ ಉತ್ತರದಲ್ಲಿ, ಹಣಕಾಸು ಸಚಿವಾಲಯದ ತೆರಿಗೆಗಾಗಿ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಅನಿತ್ ಗೋಯಲ್, ಕೆಲವು ಈಶಾನ್ಯ ರಾಜ್ಯಗಳಲ್ಲಿನ ಜನರು ಮತ್ತು ವಲಸಿಗರು ಆಧಾರ್ಗೆ ಪ್ಯಾನ್ ಕಾರ್ಡ್ ಲಗತ್ತಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಪ್ಯಾನ್ ಕಾರ್ಡ್ಗಳನ್ನು ಹೊಂದಿರುವ ಅನೇಕ ವಲಸಿಗರಿಗೆ ಆಧಾರ್ ಕಾರ್ಡ್ಗಳಿಲ್ಲ ಎಂಬುದು ಮುಖ್ಯ ಸಮಸ್ಯೆಯಾಗಿದೆ. ಪ್ಯಾನ್ ಕಾರ್ಡ್ ಅನೇಕ ವಲಸಿಗರ ಹಣದ ವ್ಯವಹಾರಕ್ಕೆ ಅಗತ್ಯವಿದ್ದರೂ, ಆಧಾರ್ಗೆ ಸಂಬಂಧವಿಲ್ಲದ ಕಾರಣ ಅದನ್ನು ಕಳೆದುಕೊಳ್ಳುವ ಬಗ್ಗೆ ಹಲವರು ಚಿಂತಿತರಾಗಿದ್ದಾರೆ. ಸಮಯ ಮಿತಿಯ ವಿಸ್ತರಣೆ ಅಥವಾ ವಲಸಿಗರಿಗೆ ರಿಯಾಯತಿಯನ್ನು ನೀಡುವಂತೆ ಪ್ರಸ್ತಾಪಿಸಲಾಗಿದ್ದು, ಕೇಂದ್ರದ ಮೇಲೆ ಒತ್ತಡ ಹೇರಲು ರಾಜಕೀಯ ಪಕ್ಷಗಳ ಹಸ್ತಕ್ಷೇಪವನ್ನು ಅನಿವಾಸಿ ಗುಂಪುಗಳು ಬಯಸುತ್ತಿವೆ.






