✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
ಆಪ್ತಮಿತ್ರ ಇವತ್ತು ಮೊದಲ ರ್ಯಾಂಕಿನೊಂದಿಗೆ ಅಫ್ಳಲಿ ಪದವಿ ಪಡೆಯುತ್ತಿದ್ದಾರೆ ಎಂಬ ಹೆಮ್ಮೆ!!_
ನೂರುಲ್ ಉಲಮಾ ಕಟ್ಟಿ ಬೆಳೆಸಿದ ಉತ್ತರ ಮಲಬಾರಿನ ಸುಜ್ಞಾನದರಮನೆ, ಸಹಸ್ರಾರು ವಿದ್ವಾಂಸ ಪ್ರತಿಭೆಗಳನ್ನು ಸಮಾಜಕ್ಕೆ ಸಮರ್ಪಿಸಿದ ಅನುಗ್ರಹೀತ ಸಂಸ್ಥೆ ಜಾಮಿಅ ಸಅದಿಯಾದ ಐವತ್ತರ ಸಂಭ್ರಮ ಇಂದು ಸಮಾರೋಪ ಗೊಳ್ಳುತ್ತಿದೆ.
ಸುನ್ನೀ ಜನಸಾಗರ ಇಂದು ಕಾಸರಗೋಡು ಜಿಲ್ಲೆಯ ದೇಳಿಯತ್ತ ಮುಖಮಾಡಿ ನಿಂತಿದೆ. ಉಮ್ಮುಲ್ ಮಆಹಿದ್ (ಸಂಸ್ಥೆಗಳ ಮಾತೆ) ಎಂಬ ಪರಮೋನ್ನತ ಪಟ್ಟಪಡೆದ ಸಂಸ್ಥೆಯಿದು. ಸಂಸ್ಥೆಯ ಸಾರಥಿ, ಅಗಾಧ ಪಾಂಡಿತ್ಯದ ಅನುಗ್ರಹೀತ ವಿದ್ವಾಂಸ ಶೈಖುನಾ ಮರ್ಹೂಂ ಎಂ ಎ ಅಬ್ದುಲ್ ಖಾದರ್ ಮುಸ್ಲಿಯಾರ್ ಉಸ್ತಾದ್ ರವರು ವಫಾತಿನ ಬಳಿಕವೂ ಕೂಡ ಅಲ್ಲೇ ಮಸೀದಿಯ ಪಕ್ಕದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾರೆ ಎಂಬುವುದೇ ಈಗಲೂ ಈ ಸಂಸ್ಥೆ ದಿನದಿಂದ ದಿನಕ್ಕೆ ಜನಮನ ತಲುಪುತ್ತಿರಲು ಕಾರಣ!!
ಸುನ್ನೀ ಉಲಮಾ ಒಕ್ಕೂಟದ ಸಾರಥಿಯಾಗಿ, ಮಲಬಾರಿನ ಧಾರ್ಮಿಕ ಚಳವಳಿಯ ಹರಿಕಾರರಾಗಿ, ವಿದ್ಯಾಭ್ಯಾಸ ಕ್ರಾಂತಿಯ ಮುಂಚೂಣಿಯಲ್ಲಿ ನಿಂತು, ಸಂಘಟನಾ ಸಂಚಲನದ ಸಾಹಸೀ ನಾಯಕನಾಗಿ, ಆಧ್ಯಾತ್ಮಿಕತೆಯ ಜೀವಂತ ಸಾಕ್ಷಿಯಾಗಿ, ಸೂಕ್ಷ್ಮ ಜೀವನದ ಪ್ರತಿರೂಪವಾಗಿ, ಸಮಯ ಪಾಲನೆಯ ಮಾದರೀ ಮೇಧಾವಿಯಾಗಿ ಮಹಾನುಭಾವರು ಮಾಡಿದ ಸಾಧನೆ ಸ್ವರ್ಣಲಿಪಿಗಳಲ್ಲಿ ಬರೆದಿಡಬೇಕಾದದ್ದೇ. ಅಲ್ಲಾಹು ಅವರ ಪಾರತ್ರಿಕ ಸ್ಥಾನಗಳನ್ನು ಇನ್ನಷ್ಟು ಉನ್ವತಿಗೇರಿಸಲಿ -ಆಮೀನ್
ಕರುನಾಡಿನವರಿಗಂತೂ ಸಅದಿಯಾದೊಂದಿಗೆ ದೊಡ್ಡ ಭಾದ್ಯತೆ ಇದೆ. ನಮ್ಮ ಹಲವಾರು ಮೊಹಲ್ಲಾಗಳ ಸಾರಥ್ಯದಲ್ಲಿರುವುದು ಅಲ್ಲಿಂದ ಕಲಿತು ಬಂದ ಪ್ರಬುದ್ಧ ವಿದ್ವಾಂಸರಾದ ಸಅದಿಗಳು! ಆದ್ದರಿಂದಲೇ ಆ ಸಂಸ್ಥೆಯೊಂದಿಗೂ ಸಾರಥಿ ಶೈಖುನಾ ಎಂಎ ಉಸ್ತಾದರೊಂದಿಗೂ ನಮಗೆ ಬಾಧ್ಯತೆ ಇದೆ, ನಾವೂ ಇಂದಿನ ಮಹಾಸಂಗಮಕ್ಕೆ ಸಾಕ್ಷಿಯಾಗಬೇಕಿದೆ!!
ಇಂದಿನ ಮಹಾ ಸಮ್ಮೇಳನದಲ್ಲಿ ನನ್ನ ಆಪ್ತಮಿತ್ರ, ಸಹಪಾಠಿಯೂ ಸಹಾದ್ಯೋಗಿಯೂ ಆಗಿರುವ ಅಲ್ ಖಾದಿಸ ಕಾವಳಕಟ್ಟೆಯ ಪ್ರಧಾನ ಮುದರ್ರಿಸ್ ಅಬ್ದುರ್ರಶೀದ್ ಸಅದಿ ಅಲ್ ಅಫ್ಳಲಿ ಕನ್ನಡಿಗರಿಗೆ ಅಭಿಮಾನವಾಗಿ ಮೊದಲ ರ್ಯಾಂಕ್ನೊಂದಿಗೆ ಅಫ್ಳಲಿ ಪದವಿ ಪಡೆಯುತ್ತಿದ್ದಾರೆ!! ಅಲ್ ಹಂದುಲಿಲ್ಲಾಹ್…
ಆರಂಭದಲ್ಲಿ ಅಕ್ಕರಂಡಿ ಉಸ್ತಾದರ ದರ್ಸಿನಲ್ಲಿ ಕಲಿತು ಬಳಿಕ ಸುಧೀರ್ಘ ಕಾಲ ಶೈಖುನಾ ಮುಹ್ಯಿಸ್ಸುನ್ನಃ ಪೊನ್ಮಳ ಉಸ್ತಾದರ ಪ್ರತಿಷ್ಠಿತ ದರ್ಸಿನಲ್ಲಿ ಕೋರ್ಸ್ ಪೂರ್ತಿಗೊಳಿಸಿ ನಂತರ ಸಅದಿ ಬಿರುದನ್ನು ದ್ವಿತೀಯ ರ್ಯಾಂಕ್ ನೊಂದಿಗೂ ಅಫ್ಳಲಿ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೂ ಪಡೆದು ಕರ್ನಾಟಕಕ್ಕೆ ಅಭಿಮಾನವಾಗಿದ್ದಾರೆ!
ಕಾಣಲು ಸಣಕಲು ಶರೀರವಾದರೂ ಅಗಾಧ ಪಾಂಡಿತ್ಯ, ವಿನಯ ತುಂಬಿದ ಸ್ವಭಾವ ಆಕರ್ಷನೀಯ ವ್ಯಕ್ತಿತ್ವ ಅವರ ಮುಖಮುದ್ರೆ. ಅಗತ್ಯ ಸಂದರ್ಭಗಳಲ್ಲಿ ಕನ್ನಡ ಹಾಗೂ ಬ್ಯಾರಿ ಭಾಷೆಗಳಲ್ಲಿ ಧಾರಾಳ ಅರಿವಿನ ಬಂಡಾರವನ್ನು ಸುರಿಯುತ್ತಾ ನಿರರ್ಗಳವಾಗಿ ಮಾತನಾಡಲೂ ಇವರಿಗೆ ಗೊತ್ತು! ಈಗ ಮೂರು ವರ್ಷದಿಂದ ನಮ್ಮ ಅಲ್ ಖಾದಿಸಾದ ಮುತಅಲ್ಲಿಂಗಳಿಗೆ ಪ್ರೀತಿಯ ಸಅದಿ ಉಸ್ತಾದ್ ಆಗಿದ್ದಾರೆ. ಅಲ್ಲಾಹು ಇನ್ನಷ್ಟು ಉನ್ನತಿಯನ್ನೂ, ಅರಿವನ್ನೂ ಧಾರಾಳ ಖೈರನ್ನು ನೀಡಿ ಅನುಗ್ರಹಿಸಲಿ-ಆಮೀನ್
✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
📲+91 9164630384