ಬೆಂಗಳೂರು: ಮಂಗಳೂರಿನಲ್ಲಿ ಇಂದು ನಡೆದ ಗೋಲೀಬಾರನ್ನು ತೀವ್ರವಾಗಿ ಖಂಡಿಸಿದ ಮುಸ್ಲಿಂ ಜಮಾಅತ್ ನಿಯೋಗ, ಮುಖ್ಯಮಂತ್ರಿಯನ್ನು ಭೇಟಿಮಾಡಿ ತಪ್ಪಿತಸ್ಥ ಪೋಲೀಸರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿತು.

ನಿಯೋಗದ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ಹತ್ತಿರದಲ್ಲೇ ಇದ್ದ ಎಡಿಜಿಪಿ ಕಮಲ್ ಪಂತ್ ರವರಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪೋಲೀಸರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ರಾಜ್ಯದ ಜನತೆಗೆ ತಿಳಿಸುವಂತೆ ಮುಖ್ಯಮಂತ್ರಿಗೆ ನಿಯೋಗ ಆಗ್ರಹಿಸಿದೆ.
ತಕ್ಷಣ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪರವರು ಮಾಧ್ಯಮದವರನ್ನು ಭೇಟಿ ಮಾಡಿ “ರಾಜ್ಯದ ಜನತೆ ಪ್ರತಿಭಟನೆಯನ್ನು ಕೈಬಿಡಬೇಕು, ಮಂಗಳೂರಿನಲ್ಲಿ ನಡೆದ ಘಟನೆಯಲ್ಲಿ ವಿಷಾದವಿದೆ, ತಪ್ಪಿತಸ್ಥ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ, ಪೋಲೀಸರ ಎಡವಟ್ಟಿಗೆ ರಾಜ್ಯದ ಜನರು ಉದ್ವೇಗಕ್ಕೊಳಗಾಗಬಾರದೆಂದು ಮನವಿ ಮಾಡಿದರು.
ನಿಯೋಗದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಗೌರಾಧ್ಯಕ್ಷರು,ಉಳ್ಳಾಲ ಸಂಯುಕ್ತ ಕಾಝಿಗಳಾದ ಕುರ್ರತುಸ್ಸಾದಾತ್ ಪಝಲ್ ಕೋಯಮ್ಮ ತಂಙಳ್ , ಅಧ್ಯಕ್ಷ ಕರ್ನಾಟಕ ಮುಫ್ತಿ ಅನ್ವರ್ ಅಲಿ ಸಾಹೇಬ್ ರಾಮನಗರ ‘ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ, ಉಪಾಧ್ಯಕ್ಷ ಖಾರಿ ಝುಲ್ಫಿಕರ್ ಸಾಹೇಬ್,ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಸಯ್ಯದ್ ಸಿ ಟಿ ಎಮ್ ಉಮ್ಮರ್ ಸಖಾಫಿ ,ಇಸ್ಮಾಯಿಲ್ ಸಅದಿ ಕಿನ್ಯ ,ಮುಂತಾದವರು ಉಪಸ್ಥಿತರಿದ್ದರು.






