ಕುವೈತ್ ಸಿಟಿ: ಬೈಕ್ ಮೂಲಕ ವಿತರಣೆ ಮಾಡುವವರನ್ನು ಗುರಿಯಾಗಿಸಿ, ಕುವೈತ್ ಗೃಹಸಚಿವಾಲಯವು ತಪಾಸಣಾ ಶಿಬಿರ ನಡೆಸಲು ಮುಂದಾಗಿದೆ. ಡೆಲಿವರಿ ಕೆಲಸಗಾರರು ವ್ಯಾಪಕವಾಗಿ ಟ್ರಾಫಿಕ್ ಕಾನೂನುಗಳನ್ನು ಉಲ್ಲಂಘಿಸುವ ಬಗ್ಗೆ ದೂರುಗಳು ದಾಖಲಾಗಿರುಗವ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.
ಆಹಾರ ಪದಾರ್ಥಗಳು, ಇತರ ಸಾಮಾಗ್ರಿಗಳನ್ನು ದ್ವಿಚಕ್ರವಾಹನಗಳಲ್ಲಿ ಮನೆಗಳಿಗೆ ತಲುಪಿಸುವ ಕೆಲಸಗಾರರು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದರಲ್ಲಿ ನಿರಾಸಕ್ತಿ ತೋರಿಸುವವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಹೆಲ್ಮೆಟ್ ಧರಿಸದಿರುವುದು, ಪರವಾನಗಿ ರಹಿತ ವಾಹನ ಚಲಾಯಿಸುವುದು, ಕೆಂಪು ದೀಪಗಳನ್ನು ಉಲ್ಲಂಘಿಸುವುದು ಮುಂತಾದ ಟ್ರಾಫಿಕ್ ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ಕಂಡು ಬರುತ್ತದೆ ಎಂಬುದಾಗಿ ದೂರುಗಳು ಬರುತ್ತಿವೆ.ಕಾಂಬೈನ್ ಮೂಲಕ ಅಧಿಕಾರಿಗಳ ಗುರಿ ಕೂಡ ಇಂತವರೇ ಅಗಿದ್ದಾರೆ.
ಆರು ಗವರ್ನರೇಟ್ಗಳಲ್ಲೂ ಪ್ರತ್ಯೇಕ ಗುಂಪುಗಳ ಮೂಲಕ ಪರಿಶೋಧನೆ ನಡೆಸಲು ಯೋಜನೆ ರೂಪಿಸಲಾಗಿದೆ. ಡೆಲಿವರಿ ಕಾರ್ಮಿಕರು ಎಚ್ಚರಿಕೆ ನೀಡದೆ ಟ್ರಾಕ್ ಬದಲಾಯಿಸುವ ಮೂಲಕ ಹೆಚ್ಚಿನ ಅಪಘಾತಗಳು ಸಂಭವಿಸುತ್ತದೆ. ಡೆಲಿವರಿ ಬಾಯ್ಗಳು ಅಪಘಾತಕ್ಕೆ ಈಡಾಗುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲದಿದ್ದರೂ, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬೈಕ್ ಅಪಘಾತಗಳು ಹೆಚ್ಚಾಗಿರುವುದಾಗಿ ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ