ರಿಯಾದ್: ವಿದೇಶೀಯರಿಗೆ ಅತೀ ಹೆಚ್ಚು ಇಷ್ಟವಾದ ನಗರಗಳ ಪೈಕಿ ಮಕ್ಕಾ ಮತ್ತು ಮದೀನಾ ಸ್ಥಾನ ಪಡೆದಿದೆ. ವಿಶ್ವದಾದ್ಯಂತ ನಾನೂರಕ್ಕಿಂತಲೂ ಹೆಚ್ಚು ನಗರಗಳಿಂದ ಸಂದರ್ಶಕರು ಚುನಾಯಿಸಲ್ಪಟ್ಟ ನೂರು ನಗರಗಳಲ್ಲಿ ಮಕ್ಕಾ ಇಪ್ಪತ್ತನೇ ಸ್ಥಾನದಲ್ಲಿದ್ದು, ಇಪ್ಪತ್ತಮೂರನೇ ಸ್ಥಾನದಲ್ಲಿ ಮದೀನಾ ಇದೆ. ಹಾಂಗ್ಕಾಂಗ್ ಸಂದರ್ಶಕರಿಗೆ ಅತೀ ಹೆಚ್ಚು ಇಷ್ಟ ನಗರವಾಗಿದೆ.
ವಿಶ್ವದ ಪ್ರವಾಸಿ ತಾಣಗಳಲ್ಲಿನ ವ್ಯವಹಾರಗಳ ಕುರಿತು ಅಧ್ಯಯನ ನಡೆಸುವ ಯೂರೋ ಮೊನಿಟರ್ ಇಂಟರ್ನ್ಯಾಷನಲ್ ತಯಾರಿಸಿದ ವರದಿಯಲ್ಲಿ ಈ ಬಗ್ಗೆ ವಿವರಣೆ ನೀಡಲಾಗಿದೆ. 400 ನಗರಗಳಿಂದ ಈ ಆಯ್ಕೆ ನಡೆದಿದೆ. ಅರಬ್ ವಲಯದಲ್ಲಿ ಮಕ್ಕಾಕೆ ಪ್ರಥಮ ಸ್ಥಾವಿದ್ದು, ದ್ವಿತೀಯ ಸ್ಥಾನ ಮದೀನಾಗಿದೆ. ಕಳೆದ ಒಂದು ವರ್ಷದಲ್ಲಿ ಮಕ್ಕಾಕೆ 98 ಲಕ್ಷ ಮತ್ತು ಮದೀನಾಕೆ 88 ಲಕ್ಷ ಸಂದರ್ಶಕರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.
2.67 ಕೋಟಿ ಪ್ರವಾಸಿಗರು ಭೆಟಿ ನೀಡಿದ ಹಾಂಗ್ಕಾಂಗ್ ಜಗತ್ತಿನಲ್ಲೇ ಅತ್ಯಧಿಕ ಜನರನ್ನು ಆಕರ್ಷಿಸಿದ ನಗರವಾಗಿದೆ. ಎರಡನೇ ಸ್ಥಾನದಲ್ಲಿ ಬಾಂಕಾಕ್ ನಗರವಿದ್ದು, 2.58 ಕೋಟಿ ಯಾತ್ರಿಕರು ಅಲ್ಲಿಗೆ ಭೇಟಿ ನೀಡಿದ್ದಾರೆ.
ಲಂಡನ್, ಮಕ್ಕಾವ್, ಸಿಂಗಪೂರ್, ಪಾರೀಸ್ ಮತ್ತಿತರ ನಗರಗಳು ನಂತರದ ಸ್ಥಾನದಲ್ಲಿದೆ. 1.6 ಕೋಟಿ ಪ್ರವಾಸಿಗರು ಸಂದರ್ಶಿಸಿದ ದುಬೈ ಏಳನೇ ಸ್ಥಾನದಲ್ಲಿದೆ. ಪ್ರಥಮ ಇಪ್ಪತ್ತು ಸ್ಥಾನಗಳಲ್ಲಿ ಭಾರತದ ದೆಹಲಿ ಮತ್ತು ಮುಂಬೈ ಸ್ಥಾನಪಡೆದಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ