ಕಾನ್ಪುರ: ದೇಶದ ಸಾಮಾಜಿಕ ಮಾಧ್ಯಮಗಳಲ್ಲಿ ಟಾಪ್ ಟ್ರೆಂಡಿಂಗ್ ವೈರಲ್ ವಿಡಿಯೋ ಅಂದರೆ, ಅದು ಪ್ರಧಾನಿ ಮೋದಿ ಮುಗ್ಗರಿಸಿ ಬಿದ್ದಿರುವುದು. ಉತ್ತರಪ್ರದೇಶದ ಕಾನ್ಪುರದ ಗಂಗಾ ತೀರದಲ್ಲಿ ದೇಶದ ಪ್ರಧಾನಮಂತ್ರಿ ಎಲ್ಲೆಡೆ ಹರಿದಾಡುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಯಲ್ಲಿ ಕಾನ್ಪುರದ ಅಟಲ್ ಘಾಟ್ನಲ್ಲಿ ನಮಾಮಿ ಗಂಗೆ ಯೋಜನೆ ಸ್ಥಿತಿಗತಿಯ ಪರಿಶೀಲನೆಯಲ್ಲಿ ತೊಡಗಿದ್ದರು. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಹಲವು ಅಧಿಕಾರಿಗಳ ಜೊತೆ ಗಂಗಾ ನದಿಯಲ್ಲಿ ಬೋಟ್ ರೈಡ್ ಮೂಲಕ ಯೋಜನೆಯ ಸ್ಥಿತಿಗತಿ ಪರಿಶೀಲಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯದ ಬೋಟ್ ರೈಡ್ ಮುಗಿಸಿ ನದಿ ತೀರಕ್ಕೆ ವಾಪಸ್ ಆದರು. ನಂತರ ಅಟಲ್ ಘಾಟ್ನ ಮೆಟ್ಟಿಲು ಹತ್ತುವಾಗ ಮುಗ್ಗರಿಸಿದ್ದಾರೆ. ಈ ವಿಡಿಯೋ ಈಗ ಟಾಪ್ ಟ್ರೆಂಡಿಂಗ್ ಆಗಿದೆ.
ಸ್ವಲ್ಪ ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಮೋದಿ ಅವರಿಗೆ ಎಚ್ಚರಿಕೆಯಿಂದ ನಡೆಯುವಂತೆ ಭದ್ರತಾ ಸಿಬ್ಬಂದಿ ಮೊದಲೇ ಹೇಳಿದರು. ಆದರೂ ಲೆಕ್ಕಿಸದೇ ವೇಗವಾಗಿ ಮೆಟ್ಟಿಲೇರುತ್ತಿದ್ದ ಪ್ರಧಾನಿ ಮೋದಿ, ಕಾಲು ಎಡವಿ ಬಿದ್ದೇ ಬಿಟ್ಟರು. ಕೂಡಲೇ ಹತ್ತಿರ ಇದ್ದ ಭದ್ರತಾ ಸಿಬ್ಬಂದಿ ಶರವೇಗದಲ್ಲಿ ಧಾವಿಸಿ ಮೋದಿ ಅವರನ್ನು ಎತ್ತಿ ನಿಲ್ಲಿಸಿದರು. ಈ ಘಟನೆಯಿಂದ ವಿಚಲಿತರಾಗದ ಮೋದಿ ಮಾಮೂಲಿನಂತೆ ಮುಂದೆ ಸಾಗಿದರು.
Narendra Modi demonstrating what he did with the economy pic.twitter.com/yuGmePOIjy
— Roshan Rai (@TheRoshanRai) December 14, 2019
ಸದಾ ಎಚ್ಚರದಿಂದಿರುವ ಪ್ರಧಾನಿ ಮೋದಿ ಎಡವಿದ್ದು ಹೇಗೆ? ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ. ಯೋಗ, ಆಹಾರ, ಪಥ್ಯ ಎಲ್ಲದರಲ್ಲೂ ನಿಗಾ ವಹಿಸುವ ಅವರು ಸದಾ ಎಚ್ಚರದಿಂದಲೇ ಇರುತ್ತಾರೆ. ಈ ರೀತಿಯ ಸಣ್ಣಪುಟ್ಟ ಎಚ್ಚರಿಕೆ ತಪ್ಪುವಿಕೆ ಅವರಿಂದ ಆಗುವುದು ವಿರಳಾತಿ ವಿರಳ. ಆದರೆ, ಅವರು ಇಂದು ಎಡವಿದ್ದಾರೆ. ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಅವರು ಮುಗ್ಗರಿಸಿದ ತಕ್ಷಣ ನೆಲಕ್ಕೆ ಎಡಗೈ ಊರದಿದ್ದರೆ. ಇಲ್ಲದಿದ್ದರೆ ಮುಖ ಮತ್ತು ಮೂಗಿಗೆ ಭಾರೀ ಪೆಟ್ಟಾಗುವ ಸಾಧ್ಯತೆ ಇತ್ತು.
ಮೋದಿ ಎಡವಿ ಬಿದ್ದಿರುವ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೆಲವರು ಕೆಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಿದ್ದಾರೆ. ಅದರಲ್ಲೂ ಹಾಸ್ಯ, ವ್ಯಂಗ್ಯದ ಪ್ರತಿಕ್ರಿಯೆಗಳೇ ಹೆಚ್ಚು. ಗಂಗೆಗೆ ಹೀಗೂ ನಮಿಸಬಹುದೇ? ಅಂತ ಒಬ್ಬರು ಪ್ರಶ್ನೆ ಮಾಡಿದ್ದರೆ, ಮೋದಿ ಅವರಿಗೆ ವಯಸ್ಸಾಯಿತು ಎಂದು ಮತ್ತೊಬ್ಬರು ಮೂದಲಿಸಿದ್ದಾರೆ.
ಇಷ್ಟೇ ಅಲ್ಲದೆ, ಮೋದಿ ಎಡವಿದ್ದು ಬಲಗಾಲೋ? ಅಥವಾ ಎಡಗಾಲೋ? ಎಂದು ಕೂಡ ಚರ್ಚೆ ಶುರುವಾಗಿದೆ. ಮೋದಿ ಅವರು ಎಡಗಾಲು ಎಡವಿದ್ದಾರೆ ದೇಶಕ್ಕೆ ಆಪತ್ತು ಕಾದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಚರ್ಚೆಯಲ್ಲೇ ತೊಡಗಿಬಿಟ್ಟಿದ್ದಾರೆ. ಅತ್ತ ಪಾಕಿಸ್ತಾನದವರಿಗೂ ಮೋದಿ ವಿರುದ್ಧ ಹಾಗೂ ಅಪಹಾಸ್ಯ ಮಾಡಲು ಈ ವಿಡಿಯೋ ಹಬ್ಬದೂಟ ಸಿಕ್ಕಿದಂತಾಗಿದೆ. ಪಾಕ್ ಮಾಧ್ಯಮಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.






