ರಿಯಾದ್: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸೌದಿ ಅರೇಬಿಯಾದಲ್ಲಿ ಕಪ್ಪು ಚುಕ್ಕೆಗಳನ್ನು ನೀಡಲಾಗುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮೂರು ವರ್ಷಗಳಲ್ಲಿ 90 ಕಪ್ಪು ಚುಕ್ಕೆಗಳನ್ನು ಪಡೆದವರ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗುವುದು, ಸೇರಿದಂತೆ ಸಂಚಾರ ನಿಯಮಗಳ ಪರಿಷ್ಕರಣೆಯನ್ನು ಪ್ರಸ್ತಾಪಿಸಿದ್ದು, ಇದು ಯಾವಾಗ ಜಾರಿಯಾಗಲಿದೆ ಎಂದು ಸಂಚಾರ ನಿರ್ದೇಶನಾಲಯ ವ್ಯಕ್ತಪಡಿಸಿಲ್ಲ.
ಸಂಚಾರ ನಿಯಮ ಉಲ್ಲಂಘನೆಯ ಅನುಸಾರವಾಗಿ ಚಾಲಕರಿಗೆ ನಿಗದಿತ ಬ್ಲ್ಯಾಕ್ ಪಾಯಿಂಟ್‌ಗಳನ್ನು ನೀಡಲಾಗುವುದು.
ಮೊದಲ ಉಲ್ಲಂಘನೆಯ ದಾಖಲಾದ ಬಳಿಕ ಮೂರು ವರ್ಷಗಳಲ್ಲಿ 90 ಬ್ಲ್ಯಾಕ್ ಪಾಯಿಂಟ್ಸ್ ಪಡೆದವರ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ. 36 ಉಲ್ಲಂಘನೆಗಳಿಗೆ ತಲಾ ಎರಡು ಕಪ್ಪು ಬಿಂದುಗಳನ್ನು ನೀಡಲಾಗುತ್ತವೆ. ಆದರೆ ಕೆಲವು ಉಲ್ಲಂಘನೆಗಳು ಮೂರು ಕಪ್ಪು ಬಿಂದುಗಳನ್ನು ಪಡೆಯಬಹುದು.
ಉಲ್ಲಂಘನೆಗಳಿಗಾಗಿ ಪಡೆದ ಬ್ಲಾಕ್ ಪಾಯಿಂಟ್‌ಗಳ ಬಗ್ಗೆ ಚಾಲಕರಿಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ. ಪರಿಷ್ಕೃತ ಟ್ರಾಫಿಕ್ ಕಾನೂನಿನ ಉಲ್ಲಂಘನೆಗಾಗಿ ತಾತ್ಕಾಲಿಕ ಅಥವಾ ಶಾಶ್ವತವಾಗಿ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲು ಕೂಡ ಕಾನೂನು ಅನುಮತಿಸುತ್ತದೆ.
ಕೊನೆಯದಾಗಿ ಸಂಚಾರ ಕಾನೂನನ್ನು ಉಲ್ಲಂಘಿಸಿದವರು ಮತ್ತೆ ಒಂದು ವರ್ಷದ ಅವಧಿಗೆ ಬೇರೆ ಯಾವುದೇ ಉಲ್ಲಂಘನೆಗೆ ಗುರಿಯಾಗದಿದ್ದರೆ ಹಿಂದೆ ಅವರ ಮೇಲೆ ಹೇರಿದ ಕಪ್ಪು ಅಂಕಗಳನ್ನು ರದ್ದುಗೊಳಿಸಲಾಗುತ್ತದೆ. ಒಂದು ವರ್ಷದೊಳಗೆ ಎರಡನೇ ಬಾರಿಗೆ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವವರಿಗೆ, ಕಾನೂನಿನ ಪ್ರಕಾರ ಗಂಭೀರ ಉಲ್ಲಂಘನೆಯನ್ನು ಪುನರಾವರ್ತಿಸುವವರಿಗೆ ಕಾನೂನಿನ ಅನ್ವಯ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ.
ಅತಿಯಾದ ವೇಗ, ಕುಡಿದು ವಾಹನ ಚಲಾಯಿಸುವುದು, ಕೆಂಪು ಸಿಗ್ನಲ್ ದಾಟುವುದು, ಅಪಾಯಕಾರಿಯಾಗಿ ಓವರ್‌ಟೇಕ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಓಡಿಸುವುದು ಮುಂತಾದ ಒಂಬತ್ತು ಉಲ್ಲಂಘನೆಗಳು ಸಾರ್ವಜನಿಕ ಸುರಕ್ಷತೆಯ ಬೆದರಿಕೆಗಳಾಗಿ ಪಟ್ಟಿಮಾಡಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ