ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೂಳೂರು ಇದರ ಡಿ ಕೆ ಎಸ್ ಸಿ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಹುಬ್ಬುರ್ರಸೂಲ್ ಹಾಗೂ ಮೀಲಾದ್ ಕಾನ್ಫರೆನ್ಸ್ ಅಲ್ ಮಾಸಾ ಹಾಲ್ ರುವಿಯಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ)ಜನ್ಮದಿನ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳ ಸಾಂಸ್ಕೃತಿಕ ಸಾಹಿತ್ಯ ಕಾರ್ಯಕ್ರಮ ವನ್ನು ಫರ್ವೀಝ್ ರಫೀಕ್ ,ಮುಹ್ಸಿನ್ ಮೋನಬ್ಬ, ಅಶ್ರಫ್ ಬಾವ ನಿರೂಪಿಸಿದರು.

ನಂತರ ಮೌಲಿದ್ ಆತ್ಮೀಯ ಮಜ್ಲಿಸ್ ನೊಂದಿಗೆ ಪ್ರಾರಂಭಿಸಲಾಯಿತು. ಮೌಲಿದ್ ಮಜ್ಲಿಸ್ ಗೆ ಬಹು ಸಯ್ಯಿದ್ ಸೈಫುದ್ದೀನ್ ತಂಙಳ್ ಅಲ್ ಹೈದ್ರೋಸಿ ಎಮ್ಮೆಮಾಡು,ಹನೀಫ್ ಸಅದಿ ವಿಟ್ಲ,ನಿಝಾರ್ ಝುಹ್ರಿ ಕನ್ಯಾನ, ಝುಬೈರ್ ಸಅದಿ ಪಾಟ್ರಕೋಡಿ ನೇತೃತ್ವ ವಹಿಸಿದರು.ನಂತರ ಸಮಿತಿ ಅಧ್ಯಕ್ಷರಾದ ಮೋನಬ್ಬ ಅಬ್ದುರ್ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಹು ಹನೀಫ್ ಸಅದಿ ಉಸ್ತಾದ್ ರವರು ಉದ್ಘಾಟಿಸಿದರು. ಮಸ್ಜಿದ್ ಅಸ್ಮಾ ಅಲ್ ಕುರುಮ್ ಇಮಾಂ – ರವರು ಖಿರಾಅತ್ ಪಠಿಸಿದರು. ನಂತರ – ನಅತೇ ಶರೀಫ್ ಕಾರ್ಯಕ್ರಮ ನಡೆಯಿತು. ಬಹು ಬಿ.ಎ ಇಬ್ರಾಹಿಂ ಸಖಾಫಿ ದಾವಣಗೆರೆ ರವರು ಹುಬ್ಬರ್ರಸೂಲ್ ಪ್ರಭಾಷಣ ಮಾಡಿದರು.
ವೇದಿಕೆಯಲ್ಲಿ ಹಾಜಿ ಅಬ್ಬಾಸ್ ಉಚ್ಚಿಲ, ಹಾಜಿ ಮುಹಮ್ಮದ್ ಹುಸೈನ್, ಹಾಜಿ ಕಾಸಿಂ,ಸೈಯಿದ್ ಆಬಿದ್ ಅಲ್ ಹೈದ್ರೋಸಿ, ಜನಾಬ್ ಫಯಾಝ್, ಹಾಜಿ ಝೈನುಲ್ ಆಬಿದೀನ್ ಮಂಗಳೂರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂದ ಅತಿಥಿಗಳನ್ನು ಅರಿಫ್ ಕೊಡಿ, ಅಮನುಲ್ಲಾ ಪಡುಬಿದ್ರಿ,ಇಬ್ರಾಹಿಂ ಅತ್ರಾಡಿ, ಸಮೀರ ಉಸ್ತಾದ್ ಹೂಡೆ,ಮೊಹಿದ್ದಿನ್ ಪಡುಬಿದ್ರಿ,ರಫೀಕ್ ಪಡುಬಿದ್ರಿ,ಅಬ್ಬುಲ್ ಲತೀಫ್ ಮಂಜೇಶ್ವರ ಹಾಗೂ ಯೂಸುಫ್ ಬಾವ ಮಂಗಳೂರು ಇವರಿಂದ ಸನ್ಮಾನಿಸುವುದರೊಂದಿಗೆ ಗೌರವಿಸಲಾಯಿತು. ಸಮಿತಿ ಸದಸ್ಯರಾದ ಉಸ್ತಾದ್ ಶುಕೂರ್ ಖಾಝಿ ಯವರು ಸ್ವಾಗತಿಸಿ, ಕಲಂದರ್ ಬಾವ ಉಸ್ತಾದ್ ನಿರೂಪಿಸಿದರು. ಡಿಕೆ ಎಸ್ ಸಿ ಒಮಾನ್ ನ ಎಲ್ಲಾ ಸಮಿತಿ ಸದಸ್ಯರು ಮತ್ತು ಹಿತೈಷಿಗಳ ಪರಿಶ್ರಮದಿಂದ ಕಾರ್ಯಕ್ರಮವೂ ಬಹಳ ಯಶಸ್ವಿಯಾಗಿ ನಡೆಯಿತು















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ