ರಿಯಾದ್: ಸೌದಿ ಅರೇಬಿಯಾದಲ್ಲಿ ಅತಿಥಿ ವಿಸಾ ಸಂಪ್ರದಾಯವನ್ನು ಶೀಘ್ರದಲ್ಲೇ ಚಾಲ್ತಿಗೆ ತರಲಾಗುವುದು ಎಂದು ರಾಷ್ಟ್ರೀಯ ಹಜ್ ಉಮ್ರಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ಲಾ ಖಾದಿ ತಿಳಿಸಿದ್ದಾರೆ. ಮಖಾಂ ಪೋರ್ಟಲ್ ಮೂಲಕ ಮಧ್ಯವರ್ತಿಗಳಿಲ್ಲದೆ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಹ್ರಮ್ ಇಲ್ಲದೆ ಉಮ್ರಾ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಅತಿಥಿ ವೀಸಾ ಕಾಲಾವಧಿಯು 90 ದಿನಗಳವರೆಗೆ ಇರಲಿದ್ದು, ದೇಶದ ನಾಗರಿಕರು ಮತ್ತು ನಿವಾಸ ದಾಖಲೆ ಇರುವ ವಿದೇಶಿ ಪ್ರಜೆಗಳಿಗೂ ಅತಿಥಿಗಳನ್ನು ತಮ್ಮದೇ ಆದ ಪ್ರಾಯೋಜಕತ್ವದೊಂದಿಗೆ ಈ ಸಂಪ್ರದಾಯದ ಮೂಲಕ ಕರೆತರಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಅತಿಥಿ ವೀಸಾವನ್ನು ಯಾವ ಉದ್ಯೋಗಿಗಳ ಆಧಾರದಲ್ಲಿ ನೀಡಲಾಗುತ್ತದೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಖಾಸಗಿ ಚಾನೆಲ್‌ಗೆ ನೀಡಿದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಜ್ ಉಮ್ರಾ ಸಮಿತಿಯ ಉಪಾಧ್ಯಕ್ಷ ಅಬ್ದುಲ್ಲಾ ಖಾದಿ ಈ ವಿಷಯ ತಿಳಿಸಿದರು.
ಹೊಸ ನಿಯಮವು ಉಮ್ರಾ ಯಾತ್ರಾರ್ಥಿಗಳಿಗೆ ದೇಶಾದ್ಯಂತ ಪ್ರಯಾಣಿಸಲು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತದೆ. ಅಂತೆಯೇ, ಪ್ರವಾಸಿ ವೀಸಾಗಳಲ್ಲಿರುವವರಿಗೆ ಉಮ್ರಾ ನಿರ್ವಹಣೆಗೆ ಯಾವುದೇ ತಡೆ ಇಲ್ಲ. ಮಹಿಳಾ ಉಮ್ರಾ ಯಾತ್ರಿಕರಿಗೆ ಮಹ್ರಮ್ ವ್ಯವಸ್ಥೆ ಬದಲಾವಣೆ ಉಂಟಾಗಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ