ಉಮ್ರಾ ವೀಸಾ ನಿಯಮಗಳನ್ನು ಸಡಿಲಿಸಲು ಸೇವಾ ಕಂಪನಿಗಳ ಆಗ್ರಹ

ಜಿದ್ದಾ: ಉಮ್ರಾ ಸೇವಾ ಕಂಪನಿಗಳು ಉಮ್ರಾ ವೀಸಾ ನಿಯಮಗಳನ್ನು ಬದಲಾಯಿಸುವಂತೆ ಬಯಸಿವೆ. ಪ್ರವಾಸಿ ವೀಸಾಗಳ ರೂಪದಲ್ಲಿ ಮಹರಂ ಇಲ್ಲದೆ ಮಹಿಳೆಯರಿಗೆ ಉಮ್ರಾ ನಿರ್ವಹಿಸಲು ಅವಕಾಶ ನೀಡುವಂತೆ ಕಂಪನಿಗಳು ಹಜ್ ಮತ್ತು ಉಮ್ರಾ ಸಚಿವರನ್ನು ಕೇಳಿಕೊಂಡಿದೆ. ಈ ಬಗ್ಗೆ ಅಧ್ಯಯನ ನಡೆಸುವುದಾಗಿ ಸಚಿವರು ಹೇಳಿದರು.

ಪ್ರಸಕ್ತ ಮಹಿಳಾ ಯಾತ್ರಾರ್ಥಿಗಳು ಮಹರಂ ಅಥವಾ ವಿವಾಹ ನಿಷಿದ್ಧ ಇರುವ ಪುರುಷ ಪಾಲಕರೊಂದಿಗೆ ಮಾತ್ರ ಪ್ರಯಾಣಿಸಲು ಅನುಮತಿ ಇದೆ. ಅಥವಾ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸಂಘಟಿತ ಉಮ್ರಾ ಗುಂಪಿನ ಮೂಲಕ ಉಮ್ರಾ ಮಾಡಲು ಅವಕಾಶವಿದೆ. ಆದರೆ ಪ್ರವಾಸಿ ವೀಸಾಗಳಲ್ಲಿ ಬರುವ ಮಹಿಳೆಯರಿಗೆ ಮಹರಂ ಇಲ್ಲದೆ ಉಮ್ರಾ ನಿರ್ವಹಿಸಲು ಅವಕಾಶ ನೀಡುವ ನಿಯಮ ಇತ್ತೀಚೆಗೆ ಜಾರಿಗೆ ಬಂದಿದೆ.

ಈ ರೀತಿಯಲ್ಲಿ ಉಮ್ರಾ ಯಾತ್ರಿಗಳಿಗೂ ಅನುಮತಿ ನೀಡುವ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಉಮ್ರಾ ಸರ್ವಿಸ್ ಕಂಪನಿ ಮಾಲೀಕರು ಮತ್ತು ಹಜ್, ಉಮ್ರಾ ಸಚಿವ ಡಾ.ಮುಹಮ್ಮದ್ ಸ್ವಾಲಿಹ್ ಬಿಂತನ್ ಅವರ ನಡುವಿನ ಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.

ಮಹರಮ್ ವ್ಯವಸ್ಥೆಯನ್ನು ರದ್ದುಪಡಿಸುವುದು ಸೇರಿದಂತೆ 11 ವಿಷಯಗಳ ಕುರಿತು ಹಜ್ ಮತ್ತು ಉಮ್ರಾ ಸಚಿವರು ಸಭೆ ನಡೆಸಿದ್ದಾರೆ ಎಂದು ಮಕ್ಕಾ ಚೇಂಬರ್ ಆಫ್ ಕಾಮರ್ಸ್‌ನ ಹಜ್ ಮತ್ತು ಉಮ್ರಾ ಸಮಿತಿಯ ಅಧ್ಯಕ್ಷ ಮರ್ವಾನ್ ಶ‌ಅಬಾನ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಉಮ್ರಾ ಸೇವಾ ಕಂಪನಿಗಳು ಸೇವೆಯ ಗುಣಮಟ್ಟವನ್ನು ಸುಧಾರಿಸಬೇಕೆಂದು ಸಚಿವರು ಒತ್ತಾಯಿಸಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!