janadhvani

Kannada Online News Paper

SSF ಉಜಿರೆ ಸೆಕ್ಟರ್ ವತಿಯಿಂದ ULAZ-2k19 ಕ್ಯಾಂಪ್

ಉಜಿರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್(SSF) ಉಜಿರೆ ಸೆಕ್ಟರ್ ವತಿಯಿಂದ ULAZ-2k19 ಕ್ಯಾಂಪ್ ಹಾಗೂ ನಾರಿಯತ್ ಸ್ವಲಾತ್ ಮಜ್ಲಿಸ್ 28/09/2019 ನೇ ಶನಿವಾರ ಮಗ್ರಿಬ್ ನಮಾಝಿನ‌ ಬಳಿಕ ಮಲ್ಜ’ಅ್ ಕ್ಯಾಂಪಸ್‌ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಮಾಚಾರು ಅಧ್ಯಕ್ಷತೆಯನ್ನು ವಹಿಸಿದ್ದರು.SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ‌.ಶರೀಫ್ ಬೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್ ಮಾಚಾರು ವಿಷಯ ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ SSF ಬೆಳ್ತಂಗಡಿ ಡಿವಿಷನ್ ಉಪಾಧ್ಯಕ್ಷರಾದ ಕರೀಮ್ ಸಖಾಫಿ,ಪ್ರ.ಕಾರ್ಯದರ್ಶಿ ಶರೀಫ್ ನಾವೂರು,ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಸೆಕ್ಟರ್ ವ್ಯಾಪ್ತಿಯ ಯುನಿಟ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರ.ಕಾರ್ಯದರ್ಶಿ ಎಂ.ಮುಬೀನ್ ಉಜಿರೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

✍ಎಂ.ಎಂ.ಉಜಿರೆ