ಅಬುಧಾಬಿ: ಅಬುಧಾಬಿಯಲ್ಲಿ ಎರಡು ಎಕ್ಸ್‌ಪ್ರೆಸ್ ಬಸ್ ಸೇವೆಗಳು ಪ್ರಾರಂಭವಾಗಲಿವೆ. ಇವುಗಳ ಪೈಕಿ ಒಂದು ಸಹಿಷ್ಣುತಾ ವಾರ್ಷಿಕೋತ್ಸವದ ಭಾಗವಾಗಿದೆ. ಮುಷ್ರಿಫ್ ಪ್ರದೇಶದ ಎರಡು ಚರ್ಚುಗಳನ್ನು ಈ ಬಸ್ ಸಂಪರ್ಕ ಹೊಂದಲಿದೆ. ಅಬುಧಾಬಿ ಬಸ್ ಟರ್ಮಿನಲ್ನಿಂದ ಸಂಖ್ಯೆ ಎಕ್ಸ್ 09 ಬಸ್ ಹೊರಟು ಮಸೀದಿಗಳ ಮೂಲಕ ಚರ್ಚುಗಳ ಮೂಲಕ ಸಂಚರಿಸಲಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಅರ್ಧ ಘಂಟೆಗೊಮ್ಮೆ ಚಲಿಸಲಿದೆ.
ಈ ಸೇವೆ ಶುಕ್ರವಾರ ಮಾತ್ರ ಲಭ್ಯವಿದ್ದು, ಮತ್ತೊಂದು ಸೇವೆಯು ಮುಹಮ್ಮದ್ ಬಿನ್ ಝಾಯಿದ್ ಸಿಟಿ ಮತ್ತು ಅಲ್ ಸಹಿಯಾ ಏರ್ ಟರ್ಮಿನಲ್ ಅನ್ನು ಸಂಪರ್ಕಿಸುವ ಬಸ್ ಆಗಿದೆ. ಸಂಖ್ಯೆ 10 ರ ಬಸ್ 60 ನಿಮಿಷಗಳಿಗೊಮ್ಮೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಸ್ ಸಾರಿಗೆ ಇಲಾಖೆ ಬಸ್ ಸೇವೆಗಳ ಘೋಷಣೆಯನ್ನು ಪ್ರಕಟಿಸಿದೆ. ಎಕ್ಸ್‌ಪ್ರೆಸ್ ಬಸ್‌ಗಳು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದ್ದು, ಯಾತ್ರಿಕರು ಗಮನಿಸುವಂತೆ ಸಾರಿಗೆ ಇಲಾಖೆ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ