ರಿಯಾದ್: ಸೌದಿಗೆ ಕುಟುಂಬ ಮತ್ತು ವ್ಯವಹಾರಕ್ಕಾಗಿ ನೀಡುವ ವೀಸಾದ ಸಿಂಧುತ್ವವು ಒಂದು ತಿಂಗಳು ಮತ್ತು ಒಂದು ವರ್ಷಕ್ಕೆ ನಿಗದಿಪಡಿಸಲಾಗಿದ್ದು, ಇದೀಗ ಜಾರಿಯಲ್ಲಿದೆ. ಈ ಮೊದಲು ಜಾರಿಯಲ್ಲಿದ್ದ, ಮೂರು, ಆರು ಮತ್ತು ಎರಡು ವರ್ಷದ ಸಂದರ್ಶಕರ ವೀಸಾಗಳನ್ನು ವೆಬ್ ಸೈಟ್ನಿಂದ ಹಿಂಪಡೆಯಲಾಗಿದೆ. ಎರಡೂ ವೀಸಾಗಳಿಗೆ ಸ್ಟಾಂಪಿಂಗ್ ಚಾರ್ಜ್ ಮುನ್ನೂರು ರಿಯಾಲ್ ಆಗಿದೆ.
ಒಂದು ತಿಂಗಳವರೆಗೆ ಪ್ರವೇಶ ಭೇಟಿ ವೀಸಾ ಒಂದಾದರೆ, ಇದಕ್ಕೆ ಸ್ಟಾಂಪಿಂಗ್ ಬಳಿಕ ಮೂರು ತಿಂಗಳ ವರೆಗೆ ಕಾಲಾವಧಿ ಇದೆ. ಈ ವೀಸಾವನ್ನು ಸೌದಿ ಅರೇಬಿಯಾದಲ್ಲಿ ಆರು ತಿಂಗಳವರೆಗೆ ನವೀಕರಿಸಬಹುದು. ನವೀಕರಿಸಲು ಪ್ರತಿ ತಿಂಗಳು ವಿಮಾ ಮೊತ್ತವನ್ನು ಮತ್ತು ಶುಲ್ಕವನ್ನು ಅಬ್ಶೀರ್ ಮೂಲಕ ಪಾವತಿಸಬೇಕು. ಬಹು ಪ್ರವೇಶ ವೀಸಾದ ಅವಧಿ ಒಂದು ವರ್ಷವಾಗಿದ್ದು, ಸ್ಟ್ಯಾಂಪಿಂಗ್ ಬಳಿಕ ಒಂದು ವರ್ಷದೊಳಗೆ ಸೌದಿಗೆ ಪ್ರವೇಶಿಸುವುದು ಸಾಧ್ಯವಿದೆ. ಈ ವೀಸಾದಲ್ಲಿ ಮೂರು ತಿಂಗಳು ನಿರಂತರವಾಗಿ ಉಳಿಯಬಹುದು. ಇದರ ನಂತರ ದೇಶವನ್ನು ಬಿಟ್ಟು ಹೋಗದೆ ಆನ್‌ಲೈನ್‌ನಲ್ಲಿ ನವೀಕರಿಸುವ ವ್ಯವಸ್ಥೆ ಇದೆ. ಆದರೆ ಆರು ತಿಂಗಳ ಬಳಿಕ ದೇಶದಿಂದ ಹೊರಗೆ ಹೋಗಿ ಬರಬೇಕಾಗುತ್ತದೆ. ನಂತರ ಒಂಬತ್ತನೇ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ನವೀಕರಿಸಿ ಮತ್ತು ಒಂದು ವರ್ಷದ ಕೊನೆಯಲ್ಲಿ ನಿರ್ಗಮಿಸಬಹುದಾಗಿದೆ.
ಇನ್ನು ಮುಂದೆ, ವ್ಯಾಪಾರ ವೀಸಾಗಳು, ಅವಲಂಬಿತ ವೀಸಾಗಳು, ಹಜ್-ಉಮ್ರಾ ಮತ್ತು ಯಾವುದೇ ಅವಧಿಯ ವೀಸಾಗಳನ್ನು ಪಡೆಯಲು ಮುನ್ನೂರು ರಿಯಾಲ್ ದರ ವಿಧಿಸಲಾಗುತ್ತದೆ. ವೀಸಾ ಒಂದು ವರ್ಷ ಅಥವಾ ಒಂದು ತಿಂಗಳು ಆದರೂ, ಮುನ್ನೂರು ರಿಯಾಲ್ ಪಾವತಿಸಿದರೆ ಸಾಕು. ಪ್ರಸ್ತುತ ಮೂರು ತಿಂಗಳ ವೀಸಾಗಳ ಮುದ್ರೆಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರನ್ನು ಒಂದು ತಿಂಗಳಿಗೆ ಅರ್ಜಿ ಸಲ್ಲಿಸುವಂತೆ ಕಾನ್ಸುಲೇಟ್ ಕೇಳಿದೆ. ಅದರಂತೆ, ಅರ್ಜಿದಾರರ ವೀಸಾಗಳ ಸ್ಟ್ಯಾಂಪಿಂಗ್ ಪ್ರಕ್ರಿಯೆಯು ಪ್ರಗತಿಯಲ್ಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ