janadhvani

Kannada Online News Paper

ಸೌದಿ: ಎರಡು ವಿಧದ ಸಂದರ್ಶಕ ವೀಸಾ ವೆಬ್ ಸೈಟ್ ನಲ್ಲಿ ಲಭ್ಯ

ರಿಯಾದ್: ಸೌದಿಗೆ ಕುಟುಂಬ ಮತ್ತು ವ್ಯವಹಾರಕ್ಕಾಗಿ ನೀಡುವ ವೀಸಾದ ಸಿಂಧುತ್ವವು ಒಂದು ತಿಂಗಳು ಮತ್ತು ಒಂದು ವರ್ಷಕ್ಕೆ ನಿಗದಿಪಡಿಸಲಾಗಿದ್ದು, ಇದೀಗ ಜಾರಿಯಲ್ಲಿದೆ. ಈ ಮೊದಲು ಜಾರಿಯಲ್ಲಿದ್ದ, ಮೂರು, ಆರು ಮತ್ತು ಎರಡು ವರ್ಷದ ಸಂದರ್ಶಕರ ವೀಸಾಗಳನ್ನು ವೆಬ್ ಸೈಟ್ನಿಂದ ಹಿಂಪಡೆಯಲಾಗಿದೆ. ಎರಡೂ ವೀಸಾಗಳಿಗೆ ಸ್ಟಾಂಪಿಂಗ್ ಚಾರ್ಜ್ ಮುನ್ನೂರು ರಿಯಾಲ್ ಆಗಿದೆ.

ಒಂದು ತಿಂಗಳವರೆಗೆ ಪ್ರವೇಶ ಭೇಟಿ ವೀಸಾ ಒಂದಾದರೆ, ಇದಕ್ಕೆ ಸ್ಟಾಂಪಿಂಗ್ ಬಳಿಕ ಮೂರು ತಿಂಗಳ ವರೆಗೆ ಕಾಲಾವಧಿ ಇದೆ. ಈ ವೀಸಾವನ್ನು ಸೌದಿ ಅರೇಬಿಯಾದಲ್ಲಿ ಆರು ತಿಂಗಳವರೆಗೆ ನವೀಕರಿಸಬಹುದು. ನವೀಕರಿಸಲು ಪ್ರತಿ ತಿಂಗಳು ವಿಮಾ ಮೊತ್ತವನ್ನು ಮತ್ತು ಶುಲ್ಕವನ್ನು ಅಬ್ಶೀರ್ ಮೂಲಕ ಪಾವತಿಸಬೇಕು. ಬಹು ಪ್ರವೇಶ ವೀಸಾದ ಅವಧಿ ಒಂದು ವರ್ಷವಾಗಿದ್ದು, ಸ್ಟ್ಯಾಂಪಿಂಗ್ ಬಳಿಕ ಒಂದು ವರ್ಷದೊಳಗೆ ಸೌದಿಗೆ ಪ್ರವೇಶಿಸುವುದು ಸಾಧ್ಯವಿದೆ. ಈ ವೀಸಾದಲ್ಲಿ ಮೂರು ತಿಂಗಳು ನಿರಂತರವಾಗಿ ಉಳಿಯಬಹುದು. ಇದರ ನಂತರ ದೇಶವನ್ನು ಬಿಟ್ಟು ಹೋಗದೆ ಆನ್‌ಲೈನ್‌ನಲ್ಲಿ ನವೀಕರಿಸುವ ವ್ಯವಸ್ಥೆ ಇದೆ. ಆದರೆ ಆರು ತಿಂಗಳ ಬಳಿಕ ದೇಶದಿಂದ ಹೊರಗೆ ಹೋಗಿ ಬರಬೇಕಾಗುತ್ತದೆ. ನಂತರ ಒಂಬತ್ತನೇ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ನವೀಕರಿಸಿ ಮತ್ತು ಒಂದು ವರ್ಷದ ಕೊನೆಯಲ್ಲಿ ನಿರ್ಗಮಿಸಬಹುದಾಗಿದೆ.

ಇನ್ನು ಮುಂದೆ, ವ್ಯಾಪಾರ ವೀಸಾಗಳು, ಅವಲಂಬಿತ ವೀಸಾಗಳು, ಹಜ್-ಉಮ್ರಾ ಮತ್ತು ಯಾವುದೇ ಅವಧಿಯ ವೀಸಾಗಳನ್ನು ಪಡೆಯಲು ಮುನ್ನೂರು ರಿಯಾಲ್ ದರ ವಿಧಿಸಲಾಗುತ್ತದೆ. ವೀಸಾ ಒಂದು ವರ್ಷ ಅಥವಾ ಒಂದು ತಿಂಗಳು ಆದರೂ, ಮುನ್ನೂರು ರಿಯಾಲ್ ಪಾವತಿಸಿದರೆ ಸಾಕು. ಪ್ರಸ್ತುತ ಮೂರು ತಿಂಗಳ ವೀಸಾಗಳ ಮುದ್ರೆಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರನ್ನು ಒಂದು ತಿಂಗಳಿಗೆ ಅರ್ಜಿ ಸಲ್ಲಿಸುವಂತೆ ಕಾನ್ಸುಲೇಟ್ ಕೇಳಿದೆ. ಅದರಂತೆ, ಅರ್ಜಿದಾರರ ವೀಸಾಗಳ ಸ್ಟ್ಯಾಂಪಿಂಗ್ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

error: Content is protected !! Not allowed copy content from janadhvani.com