ಹೊಸದಿಲ್ಲಿ, ಆ.30: ಸಾರ್ವಜನಿಕ ರಂಗದ 10 ಪ್ರಮುಖ ಬ್ಯಾಂಕ್ ಗಳನ್ನು 4 ಬ್ಯಾಂಕ್ ಗಳಾಗಿ ವಿಲೀನಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಈ ಹಣಕಾಸು ವರ್ಷದಲ್ಲಿ 18ರಲ್ಲಿ 14 ಸಾರ್ವಜನಿಕರ ರಂಗದ ಬ್ಯಾಂಕ್ ಗಳು ಲಾಭದಲ್ಲಿವೆ. ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನದಿಂದ ಭಾರೀ ಲಾಭವಾಗಿದೆ ಎಂದರು.
ಇದೇ ಸಂದರ್ಭ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಗಳು ವಿಲೀನಗೊಳ್ಳಲಿವೆ.
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳು ವಿಲೀನಗೊಳ್ಳಲಿವೆ.
ಯುನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನಗೊಳ್ಳಲಿವೆ.
ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಗಳು ವಿಲೀನಗೊಳ್ಳಲಿವೆ ಎಂದು ತಿಳಿಸಿದರು.






