janadhvani

Kannada Online News Paper

ಹಜ್ ಸಂಪೂರ್ಣ ಯಶಸ್ವಿ: ಸಹಕರಿಸಿದ ಸರ್ವರಿಗೂ ಧನ್ಯವಾದಗಳು- ಮಕ್ಕಾ ಗವರ್ನರ್

ಮಕ್ಕಾ: ಈ ವರ್ಷ ಹಜ್ ತೀರ್ಥಯಾತ್ರೆ ಸಂಪೂರ್ಣ ಯಶಸ್ಸನ್ನು ಕಂಡಿದೆ ಮತ್ತು ಹಜ್ ಪೂರ್ಣಗೊಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಕ್ಕಾದ ಗವರ್ನರ್ ಖಾಲಿದ್ ಅಲ್ ಫೈಝಲ್ ರಾಜಕುಮಾರ ಹೇಳಿದ್ದಾರೆ. ಮಿನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯಪಾಲರು ಮಾತನಾಡುತ್ತಿದ್ದರು.

ಈ ವರ್ಷದ ಹಜ್ ತೀರ್ಥಯಾತ್ರೆ ಋತುವಿನಲ್ಲಿ 41 ಮಿಲಿಯನ್ ಘನ ಮೀಟರ್ ನೀರನ್ನು ಬಳಸಲಾಗಿದೆ. ಹಜ್ಜಾಜ್‌ಗಳ ಸೇವೆಗಳಿಗೆ ಮೂರೂವರೆ ಲಕ್ಷ ಸೇವಕರನ್ನು ನಿಯೋಜಿಸಲಾಯಿತು.1,20,000 ಭದ್ರತಾ ಸಿಬ್ಬಂದಿ, 35,000 ಹಜ್ ಸ್ವಯಂಸೇವಕರು, 30,000 ಆರೋಗ್ಯ ಕಾರ್ಯಕರ್ತರು ಮತ್ತು ವಿವಿಧ ಸಚಿವಾಲಯಗಳ ಅಡಿಯಲ್ಲಿ ಅನೇಕರು ಇದ್ದರು.

ಐದು ಲಕ್ಷದಷ್ಟು ಹಜ್ಜಾಜ್ಗಳು 173 ಆಸ್ಪತ್ರೆಗಳು, ವಿವಿಧ ಆರೋಗ್ಯ ಕೇಂದ್ರಗಳು ಮತ್ತು ಮೊಬೈಲ್ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದ ಎಲ್ಲಾ ಯಾತ್ರಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಅರಫಾಗೆ ಕರೆದೊಯ್ಯಲಾಯಿತು. 336 ಹಜ್ಜಾಜ್‌ಗಳು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, 2,700 ಜನರು ಇತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ರಾಜಕುಮಾರ ಹೇಳಿದರು.