ಮಂಗಳೂರು: ಹಿರಿಯ ವಿದ್ವಾಂಸ ಅಲ್ ಮದೀನ ಸಂಸ್ಥೆಯ ಶಿಲ್ಪಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮರಣ ವಾರ್ತೆ ಕೇಳಿ ತೀವ್ರ ಧು:ಖಿತನಾದೆ, ಅವರ ವಿಯೋಗ ಸಮಾಜಕ್ಕೆ ತುಂಬಲಾರದ ನಷ್ಟ. ಹುಟ್ಟೂರು ಕೊಡಗು ಆದರೂ ತನ್ನ ಸೇವೆಗೆ ಕರಾವಳಿ ಭಾಗವನ್ನು ಆಯ್ಕೆ ಮಾಡಿದ ಶೈಖುನಾರವರು ಮುಸ್ಲಿಂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ.
ಸುಮಾರು 25 ವರ್ಷಗಳ ಹಿಂದೆ ಈ ಸಮಾಜದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಯತೀಂ ಮಕ್ಕಳಿಗೆ ವಸತಿ ಸೌಕರ್ಯದೊಂದಿಗೆ ಗುಣಮಟ್ಟದ ಉಭಯ ಶಿಕ್ಷಣ ನೀಡಿ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಆರಂಭಿಸಿದ ಅಲ್ ಮದೀನಾ ಎಂಬ ಸಂಸ್ಥೆ, ಶೈಖುನಾರವರು ಈ ಉಮ್ಮತ್ ಗೆ ನೀಡಿದ ಮಹಾ ಕೊಡುಗೆಯಾಗಿದೆ, ಇಂದು ಆ ಸಂಸ್ಥೆ ಬೆಳೆದು ಹೆಮ್ಮರವಾಗಿದೆ,ದೇಶ ವಿದೇಶಗಳಲ್ಲಿ ಅದರ ಕೀರ್ತಿ ಹಬ್ಬಿದೆ.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ನ ಎಲ್ಲಾ ಕಾರ್ಯಕ್ರಮಗಳಿಗೂ ಉಸ್ತಾದರು ನೀಡಿದ ಸಹಾಯ ಸಹಕಾರ ಮತ್ತು ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವಿಲ್ಲ.ಅಲ್ಲಾಹು ಅವರ ಪದವಿಯನ್ನು ಉನ್ನತಿಗೇರಿಸಲಿ….ಎಂದು ಪ್ರಾರ್ಥಿಸುತ್ತಾ ಅವರ ವಿಯೋಗಕ್ಕೆ ಸಂತಾಪ ಸೂಚಿಸುವೆನು ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಜು ನಿರ್ವಹಿಸಿ, ಖುರ್ ಆನ್ ಪಾರಾಯಣದೊಂದಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಲು ಈ ಮೂಲಕ ವಿನಂತಿಸುತ್ತೇನೆ.
ಆತೂರು ಸಅದ್ ಮುಸ್ಲಿಯಾರ್
(ಅಧ್ಯಕ್ಷರು ಎಸ್ ಜೆ ಎಂ ಕರ್ನಾಟಕ)















ಇನ್ನಷ್ಟು ಸುದ್ದಿಗಳು
21 ಮಕ್ಕಳನ್ನು ಹಿಡಿದು ರನ್ನರ್ ಪ್ರಶಸ್ತಿ ಪಡೆದ ಮೈಂದಗುರಿ ಮದ್ರಸ
ಕಾಟಿಪಳ್ಳ ನೂರಿಯ್ಯ ಮದ್ರಸ ಹ್ಯಾಟ್ರಿಕ್ ಚಾಂಪಿಯನ್
ವಿಟ್ಲ ಟೊಲೆಡೋ ಉಚಿತ ಕರಿಯರ್ ಗೈಡೆನ್ಸ್ ಶಿಬಿರ
ಕೆಸಿಎಫ್ (KCF) ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸೋಣ
ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿ ಮಹಾಸಭೆ
ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9