janadhvani

Kannada Online News Paper

SSF ಉಜಿರೆ ಸೆಕ್ಟರ್ ಅರ್ಧ ವಾರ್ಷಿಕ ಮಹಾಸಭೆ

ಉಜಿರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( ರಿ.) SSF ಉಜಿರೆ ಸೆಕ್ಟರಿನ ಅರ್ಧ ವಾರ್ಷಿಕ ಮಹಾಸಭೆಯು ದಿನಾಂಕ 19.07.2019 ನೇ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಸೆಕ್ಟರ್ ಕಛೇರಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಮಾಚಾರು ವಹಿಸಿದ್ದರು.ಸಭೆಯನ್ನು KCF ನಾಯಕರಾದ ಇಕ್ಬಾಲ್ ಕಾಜೂರು ರವರು ಉದ್ಘಾಟಿಸಿದರು.SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್, ಮಾಚಾರು ಹಾಗೂ ಮಲ್ಜ’ಅ್ ಸಂಸ್ಥೆಯ ಜನರಲ್ ಮ್ಯಾನೆಜರ್ ಮೆಹಬೂಬ್ ರಹ್ಮಾನ್ ಸಖಾಫಿ‌,ಕಿನ್ಯ ಸಂಘಟನಾ ತರಗತಿಯನ್ನು ನಡೆಸಿದರು.

KCF ನಾಯಕರಾದ ಇಕ್ಬಾಲ್ ಕಾಜೂರು ಹಾಗೂ ಅಶ್ರಫ್ ಮುಸ್ಲಿಯಾರ್ ಕನ್ಯಾಡಿ ಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಪ್ರ.ಕಾರ್ಯದರ್ಶಿ ಮಹಮ್ಮದ್ ಮುಬೀನ್, ಉಜಿರೆ ವಾಚಿಸಿದರು. ಕೋಶಾಧಿಕಾರಿ ಸಿದ್ದೀಕ್ ಕಾಜೂರು ಲೆಕ್ಕ ಪತ್ರ ಮಂಡಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಉಜಿರೆ ಕ್ಯಾಂಪಸ್ ಮೆಂಬರ್ ಶಿಪ್ ಬಗ್ಗೆ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಡಿವಿಷನ್ ವೀಕ್ಷಕರಾಗಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು,ಉಜಿರೆ ಸೆಕ್ಟರ್ ಉಸ್ತುವಾರಿ ಅಶ್ರಫ್ ಸ’ಅದಿ ನಾವೂರು ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಹಾಗೂ SSF ಉಜಿರೆ ಸೆಕ್ಟರ್ ಮಾಜಿ ಅಧ್ಯಕ್ಷರಾದ ಅಶ್ರಫ್ KCF ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಮಹಮ್ಮದ್ ಮುಬೀನ್,ಉಜಿರೆ ಸ್ವಾಗತಿಸಿದರು. ಕೊನೆಯಲ್ಲಿ ಜೊತೆ ಕಾರ್ಯದರ್ಶಿ ಅನ್ಸಾರ್ ಮಾಚಾರು ಧನ್ಯವಾದವಿತ್ತರು.

ವರದಿ: ಎಂ.ಎಂ.ಉಜಿರೆ