janadhvani

Kannada Online News Paper

ತಮ್ಮ ವಿದ್ಯಾರ್ಥಿ ಜೀವನವನ್ನು SSF Campus ನೊಂದಿಗೆ ವಿನಿಯೋಗಿಸಿ

ಅಧುನಿಕ ಕಾಲಘಟ್ಟವು ಪಾಶ್ಚಾತ್ಯ ಸಂಸ್ಕೃತಿಗಳೊಂದಿಗೆ ಮುನ್ನುಗ್ಗುತ್ತಿರುವಾಗ ನಮ್ಮ ಮುಸ್ಲಿಂ ಸಮುದಾಯವು ಕೂಡ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಹೊಂದಿಕೊಂಡು ಅಲ್ಲಾಹನು ನಿಷೇಧಿಸಿದಂತಹ ಅನಾಚಾರಗಳಲ್ಲಿ ಮುಳುಗಿ ಹೋಗಿದೆ.

ಅದರಲ್ಲೂ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಂತಹ ಮುಸ್ಲಿಂ ವಿದ್ಯಾರ್ಥಿಗಳು, ಇಸ್ಲಾಂ ದೀನ್ ಕಲಿಸಿ ಕೊಟ್ಟಂತಹ ಇಸ್ಲಾಮಿನ ಆಶಯ ಆದರ್ಶಗಳನ್ನು ತಳ್ಳಿ ಹಾಕಿ ಪಾಶ್ಚಾತ್ಯ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಇಸ್ಲಾಂಗೆ ವಿರುದ್ಧವಾಗಿ ಜೀವಿಸುತ್ತಿದ್ದಾರೆ.

ಇಸ್ಲಾಂ ಕಟುವಾಗಿ ವಿರೋಧಿಸಿದಂತಹ ಮಧ್ಯಪಾನ, ಗಾಂಜ, ಡ್ರಗ್ಸ್ ಮೊದಲಾದ ಅಮಲು ಪದಾರ್ಥಗಳಿಗೆ ನಮ್ಮ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಈಗಿನ ಕಾಲದ ವಿದ್ಯಾರ್ಥಿಗಳು ಇಸ್ಲಾಮಿನ ಬಗ್ಗೆ ಹಾಗೂ ಮರಣದ ಬಗ್ಗೆ ಮರೆತು ಜೀವಿಸುತ್ತಿದ್ದಾರೆ.

ಇಂತಹ ಸನ್ನಿವೇಶಗಳನ್ನು ಅರಿತ ನಮ್ಮ SSF ಸಂಘಟನೆಯ ಪಂಡಿತ ಸಾದಾತುಗಳು, ನಾಯಕರುಗಳು ಇಂದು ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವಂತಹ ಯುವ ವಿದ್ಯಾರ್ಥಿಗಳನ್ನು ಸರಿ ದಾರಿಗೆ ಕರೆತರಲು SSF Campus ಎಂಬ ಸಂಘಟನೆಯನ್ನು ರೂಪಿಕರಿಸಿದರು. ಇದೀಗ ಭಾರತಾದ್ಯಂತ ಬಹಳಷ್ಟು ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. SSF ಸಂಘಟನೆಯು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರು ತಿಳಿಸಿಕೊಟ್ಟಂತಹ ನೈಜ ಹಾದಿಯಲ್ಲಿ ಜೀವಿಸಲು CAMPUS ವಿದ್ಯಾರ್ಥಿ ಸಂಘಟನೆಯು ನೈಜ ದಾರಿ ತೋರಿಸಿಕೊಡುತ್ತಿವೆ.

SSF ಸಂಘಟನೆ ಗೆ ನಾವು ಬೇಕಾಗಿಲ್ಲ. ಆದರೆ ನಮ್ಮ ಇಹಪರ ವಿಜಯಕ್ಕೆ ಬೇಕಾಗಿ ನಮಗೆ SSF ಬೇಕಾಗಿದೆ. ಪ್ರತಿಯೊಂದು ಸಂಘಟನೆಗೂ ಒಂದೊಂದು ರೀತಿಯ ಗುರಿ ಇದ್ದೇ ಇರುತ್ತದೆ. ಆದೇ ರೀತಿ SSF ನ ಗುರಿ ಪ್ರತಿಯೊಬ್ಬ ಮುಸಲ್ಮಾನನು 5 ವಕ್ತ್ ನಮಾಝ್ ಇಮಾಮ್ ಜಮಾಅತ್ ಆಗಿ ನಿರ್ವಹಿಸಿ ಮುತ್ತು ನೆಬಿ ﷺ ಪಾಲಿಸಿದ ಆಶಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸುವುದಾಗಿದೆ. SSF ರಾಜಕೀಯ ಸಂಘಟನೆಯಲ್ಲ.

ಇದೊಂದು ಧಾರ್ಮಿಕ ಸಂಘಟನೆಯಾಗಿದೆ. ಇಸ್ಲಾಮಿನ ಚೌಕಟ್ಟಿನೊಳಗೆ ಜೀವಿಸಲು ಕಲಿಸಿ ಕೊಡುವಂತಹ ಸಂಘಟನೆಯಾಗಿದೆ. ನಮ್ಮ ಇಹ ಹಾಗೂ ಪರಲೋಕ ಜೀವನ ವಿಜಯಗೊಳ್ಳಲು ನಮಗೆ SSF ಅತ್ಯವಶ್ಯಕವಾಗಿದೆ.

ಶಿಸ್ತು ಬದ್ಧ ವಿದ್ಯಾರ್ಥಿ ಮತ್ತು ಧಾರ್ಮಿಕ ಸೌಹಾರ್ದತೆಯ ಕ್ಯಾಂಪಸ್ ನಿರ್ಮಾಣಕ್ಕಾಗಿ ಪ್ರತಿ ಮುಸ್ಲಿಂ ವಿದ್ಯಾರ್ಥಿಗಳು SSF ನ ಜೊತೆ ಕೈ ಜೋಡಿಸಬೇಕಾಗಿದೆ.

SSF CAMPUS MEMBERSHIP CAMPAIGN
2019 JULY 10-25

ಜಹಫರ್ ಸಾಧಿಕ್ ಕಟ್ಟದಪಡ್ಪು
SSF Campus Secretary Kakyapadavu Unit.

error: Content is protected !! Not allowed copy content from janadhvani.com