janadhvani

Kannada Online News Paper

ಅಲ್‌ ಬದ್ರಿಯಾ ಚಾರಿಟೇಬಲ್ ಟ್ರಸ್ಟ್ ಗೋಳಿಪಡ್ಪು: ಸ್ವಚ್ಛತಾ ಆಂದೋಲನ

ಸಜೀಪನಡು: ಗೋಳಿಪಡ್ಪು ಗ್ರಾಮದ ಸುಮಾರು 500 ಮೀಟರ್ ಗಳ ವರೆಗೆ ರಸ್ತೆ ಹಾಗೂ ಪರಿಸರವನ್ನು ಅಲ್ ಬದ್ರಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆದಿತ್ಯವಾರದಂದು ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಯಿತು.

ಊರಿನ ಅನೇಕ ಯುವಕರು ಯಾವುದೇ ಪ್ರತಿಫಲ ಅಪೇಕ್ಷಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡ ಸಂಘಟನೆಯ ಎಲ್ಲಾ ಸದಸ್ಯರನ್ನು ಊರಿನ ಗಣ್ಯರು ಶ್ಲಾಘಿಸಿದರು.