ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಷನ್ ದುಬೈ ಸೌತ್ ಝೋನ್ ಇದರ ಅಧೀನ ದಲ್ಲಿ ಕಾರ್ಯಾಚರಿಸುತ್ತಿರುವ ಬರ್-ದುಬೈ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 21.06.2019 ರಂದು ಕೆ.ಸಿ.ಎಫ್ ಬರ್-ದುಬೈ ಸಭಾಂಗಣದಲ್ಲಿ ಇಬ್ರಾಹಿಂ ಕಳತ್ತೂರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಆಸಿಫ್ ಇಂದ್ರಾಜೆ ಸಭೆಯ ಅತಿಥಿಗಳನ್ನು ಸ್ವಾಗತಿಸಿದರು.ಅಬ್ದುಲ್ಲಾ ಸಅದಿ ಉಸ್ತಾದ್ ರವರ ದುಆಃ ದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಸಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ನಂತರ ಖಾದರ್ ಕೈಯೂರು 2018 -19 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ವನ್ನು ಸಭೆಯಲ್ಲಿ ಮಂಡಿಸಿದರು. ವರದಿ ಹಾಗೂ ಲೆಕ್ಕ ಪತ್ರವನ್ನು ಸರ್ವಾನನುಮತದಿಂದ ಅಂಗೀಕರಿಸಲಾಯಿತು.
ಮುಖ್ಯ ಅತಿಥಿಯಾಗಿ ಝೋನ್ ಅಧ್ಯಕ್ಷ ಅಝೀಝ್ ಅಹ್ಸನಿ ಭಾಗವಹಿಸಿ, ಸಂಘಟನೆಯ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ಭಾಷಣ ಗೈದರು.ಚುನಾವಣಾ ವೀಕ್ಷಕರಾಗಿ ಆಗಮಿಸಿದ ಝೋನ್ ಶರೀಫ್ ಹೊಸ್ಮಾರ್ ರವರು ಸದರಿ ಸಮಿತಿಯನ್ನು ಬರ್ಖಾಸು ಗೊಳಿಸಿ ಹೊಸ ಸಮಿತಿಗೆ ಚಾಲನೆ ನೀಡಿದರು.
ನೂತನ ಸಮಿತಿಯ ವಿವರ :
ಅಧ್ಯಕ್ಷರು : ನಿಝಾಮುದ್ದೀನ್ ಸಖಾಫಿ
ಪ್ರಧಾನ ಕಾರ್ಯದರ್ಶಿ: ಫಾರೂಕ್ ಮಂಚಿ
ಕೋಶಾಧಿಕಾರಿ : ಹನೀಫ್ ಕುಲ್ಯಾರ್
ಪಬ್ಲಿಕೇಷನ್ ವಿಭಾಗ :
ಅಧ್ಯಕ್ಷರು : ಕಬೀರ್ ಜಟ್ಟಿಪಲ್ಲ ಕಾರ್ಯದರ್ಶಿ : ಮುಹಿಯದ್ದೀನ್ ಶಿವಮೊಗ್ಗ
ಶಿಕ್ಷಣ ವಿಭಾಗ :
ಅಧ್ಯಕ್ಷರು : ಸಲ್ಮಾನ್ ಸಖಾಫಿ
ಕಾರ್ಯದರ್ಶಿ : ಮುಝಮ್ಮಿಲ್
ಸಾಂತ್ವನ ವಿಭಾಗ :
ಅಧ್ಯಕ್ಷರು : ಇಬ್ರಾಹಿಂ ಮದನಿನಗರ
ಕಾರ್ಯದರ್ಶಿ: ಅಲ್ತಾಫ್ ಪರಂಗಿಪೇಟೆ
ಇಹ್ಸಾನ್ ವಿಭಾಗ :
ಅಧ್ಯಕ್ಷರು : ರಫೀಕ್ ಮೋಂತಿಮಾರ್
ಕಾರ್ಯದರ್ಶಿ : ನೌಫಲ್ ಬೆಳ್ಳಾರೆ
ಕೊನೆಯಲ್ಲಿ 11 ನಾರಿಯತ್ ಸ್ವಲಾತ್ ಪಠಿಸುವ ಮೂಲಕ ಲೆಕ್ಕ ಪತ್ರ ಹಾಗೂ ಇತರ ದಾಖಲೆಗಳನ್ನು ನೂತನ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ನೂತನ ಕಾರ್ಯದರ್ಶಿ ಫಾರೂಕ್ ಮಂಚಿ ಇವರ ಧನ್ಯವಾದ ಹೇಳಿದರು. ಸ್ವಲಾತ್ ನೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ