ಅಬುಧಾಬಿ: ಪೊಷಕರೊಂದಿಗೆ ಯುಎಇ ಸಂದರ್ಶಿಸುವ ಹದಿನೆಂಟರ ಒಳಗಿನ ಮಕ್ಕಳಿಗೆ ಉಚಿತ ವಿಸಾ ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಶಿಪ್ ತಿಳಿಸಿದೆ.
ಪ್ರತೀ ವರ್ಷ ಜುಲೈ 15ರಿಂದ ಸೆಪ್ಟೆಂಬರ್ 15ರ ವರೆಗೆ ಈ ಸೌಲಭ್ಯ ದೊರಕಲಿದ್ದು, ವಿನೋದ ಯಾತ್ರಿಕರ ಸಂಖ್ಯೆಯಲ್ಲಿ ಕಡಿಮೆ ಕಂಡು ಬರುವ ಸಮಯದಲ್ಲಿ ಹೆಚ್ವಿನ ಯಾತ್ರಿಕರನ್ನು ಆಕರ್ಷಿಸುವ ಸಲುವಾಗಿ ಈ ನಡೆ ಎನ್ನಲಾಗಿದೆ.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಬಗೆಗಿನ ತೀರ್ಮಾನವನ್ನು ಸಚಿವಾಲಯ ಕೈಗೊಂಡಿದೆ.
ಇದು ಈ ಯೋಜನೆ ಜಾರಿಯಾಗುವ ಪ್ರಥಮ ವರ್ಷವಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಹದಿನಾಲ್ಕು ದಿನಗಳ ಎಕ್ಸ್ಪ್ರೆಸ್ ಟೂರಿಸ್ಟ್ ವಿಸಾಗೆ 497 ದಿರ್ಹಂ ಮತ್ತು 30 ದಿನಗಳ ಮಲ್ಟಿ ಎಂಟ್ರಿ ಟೂರಿಸ್ಟ್ ವಿಸಾಗೆ 917 ದಿರ್ಹಂ ದರ ಪಾವತಿ ಮಾಡಬೇಕಾಗಿದೆ.
ಈ ತೀರ್ಮಾನ ಮೂಲಕ ದೇಶಕ್ಕೆ ಹೆಚ್ಚಿನ ಸಂಚಾರಿಗಳನ್ನು ಆಕರ್ಷಿಸಲು ಸಾಧ್ಯವಾದರೂ, ಹೆಚ್ಚಿನ ಸಂಖ್ಯೆಯ ವಿದೇಶಿಗಳು ಬರುವ ಸಾಧ್ಯತೆ ಕಡಿಮೆ ಎಂದು ಟ್ರಾವೆಲ್, ಟೂರೀಸಂ ವಲಯದಲ್ಲಿ ಕಾರ್ಯಾಚರಿಸುವ ಪರಿಣಿತರ ಅಭಿಪ್ರಾಯವಾಗಿದೆ.
ಅತೀ ಹೆಚ್ಚಿನ ಸಂಚಾರಿಗಳು ಬರುವ ಭಾರತ ಸಹಿತ ದೇಶಗಳಿಂದ ಶಾಲಾ ರಜಾದಿನಗಳಾದ ಎಪ್ರಿಲ್ನಿಂದ ಜೂನ್ ವರೆಗಿನ ಸಮಯದಲ್ಲಿ ಅತೀ ಹೆಚ್ಚಿನ ಸಂಚಾರಿಗಳು ಆಗಮಿಸುತ್ತಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ