ದೋಹಾ: ಮೇ 8ಕ್ಕೆ ಪ್ರಾರಂಭಗೊಂಡ ದೋಹಾ ಮೆಟ್ರೋ ರೆಡ್ ಸೌತ್ನ ಸಂಚಾರ ಸಮಯವು ರಮಝಾನ್ ನ ಬಳಿಕ ಬದಲಾವಣೆಯಾಗಲಿದೆ. ಬೆಳಗ್ಗೆ ಏಳು ಗಂಟೆಗೆ ಆಫೀಸ್ ತಲುಪುವವರ ಹಿತಕ್ಕಾಗಿ ಪ್ರಥಮ ಓಡಾಟವು ಬೇಗನೇ ಪ್ರಾರಂಭವಾಗಲಿದೆ.
ಇದೀಗ ಚಾಲನೆಯಲ್ಲಿರುವ ಕ್ರಮವು ರಮಝಾನ್ ಪ್ರಯುಕ್ತ ಕ್ರಮೀಕರಿಸಲಾದ ವೇಳಾಪಟ್ಟಿಯಾಗಿದ್ದು, ಮುಂದಿನ ವೇಳಾಪಟ್ಟಿಯನ್ನು ಸಾಮಾಜಿಕ ಮಾದ್ಯಮ ಮೂಲಕ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪ್ರಸಕ್ತ ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೆ ಓಡಾಟವಿದ್ದು, ಹದಿನೆಂಟು ನಿಲ್ದಾಣಗಳ ಪೈಕಿ 13ರಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಕತ್ತಾರ, ಲೆಗ್ತಾಫಿಯಾ, ಖತರ್ ಯನಿವೇರ್ಸಿಟಿ, ಲುಸೈನ್ ಮುಂತಾದ ಸ್ಟೇಷನ್ ಗಳಿಗೆ ಶೀಘ್ರದಲ್ಲೇ ಸೇವೆ ಪ್ರಾರಂಭಗೊಳ್ಳಲಿದೆ. ರವಿವಾರದಿಂದ ಗುರುವಾರದ ವರೆಗೆ ಸಧ್ಯ ಸೇವೆ ನೀಡಲಾಗುತ್ತಿದೆ.
ಹೊಸ ನಿಲ್ದಾಣಗಳ ಕಾಮಗಾರಿ, ಹಳಿ ನಿರ್ಮಾಣ ಕ್ಕಾಗಿ ವಾರದಲ್ಲಿ ಎರಡು ದಿನಗಳನ್ನು ಕಾಯ್ದಿರಿಸಲಾಗಿದೆ. ದೋಹ ಮೆಟ್ರೋದ ಇತರ ಹಳಿಗಳು ಮತ್ತು ರೆಡ್ ಲೈನ್ನ ಇತರ ನಿಲ್ದಾಣಗಳು 2020 ರೊಳಗೆ ಕಾರ್ಯನಿರತವಾಗಲಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ