janadhvani

Kannada Online News Paper

ದೋಹಾ: ಮೇ 8ಕ್ಕೆ ಪ್ರಾರಂಭಗೊಂಡ ದೋಹಾ ಮೆಟ್ರೋ ರೆಡ್ ಸೌತ್‌ನ ಸಂಚಾರ ಸಮಯವು ರಮಝಾನ್ ‌ನ ಬಳಿಕ ಬದಲಾವಣೆಯಾಗಲಿದೆ. ಬೆಳಗ್ಗೆ ಏಳು ಗಂಟೆಗೆ ಆಫೀಸ್ ತಲುಪುವವರ ಹಿತಕ್ಕಾಗಿ ಪ್ರಥಮ ಓಡಾಟವು ಬೇಗನೇ ಪ್ರಾರಂಭವಾಗಲಿದೆ.

ಇದೀಗ ಚಾಲನೆಯಲ್ಲಿರುವ ಕ್ರಮವು ರಮಝಾನ್ ಪ್ರಯುಕ್ತ ಕ್ರಮೀಕರಿಸಲಾದ ವೇಳಾಪಟ್ಟಿಯಾಗಿದ್ದು, ಮುಂದಿನ ವೇಳಾಪಟ್ಟಿಯನ್ನು ಸಾಮಾಜಿಕ ಮಾದ್ಯಮ ಮೂಲಕ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಪ್ರಸಕ್ತ ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೆ ಓಡಾಟವಿದ್ದು, ಹದಿನೆಂಟು ನಿಲ್ದಾಣಗಳ ಪೈಕಿ 13ರಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಕತ್ತಾರ, ಲೆಗ್ತಾಫಿಯಾ, ಖತರ್ ಯನಿವೇರ್ಸಿಟಿ, ಲುಸೈನ್ ಮುಂತಾದ ಸ್ಟೇಷನ್ ಗಳಿಗೆ ಶೀಘ್ರದಲ್ಲೇ ಸೇವೆ ಪ್ರಾರಂಭಗೊಳ್ಳಲಿದೆ. ರವಿವಾರದಿಂದ ಗುರುವಾರದ ವರೆಗೆ ಸಧ್ಯ ಸೇವೆ ನೀಡಲಾಗುತ್ತಿದೆ.

ಹೊಸ ನಿಲ್ದಾಣಗಳ ಕಾಮಗಾರಿ, ಹಳಿ ನಿರ್ಮಾಣ ಕ್ಕಾಗಿ ವಾರದಲ್ಲಿ ಎರಡು ದಿನಗಳನ್ನು ಕಾಯ್ದಿರಿಸಲಾಗಿದೆ. ದೋಹ ಮೆಟ್ರೋದ ಇತರ ಹಳಿಗಳು ಮತ್ತು ರೆಡ್ ಲೈನ್‌ನ ಇತರ ನಿಲ್ದಾಣಗಳು 2020 ರೊಳಗೆ ಕಾರ್ಯನಿರತವಾಗಲಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com