janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ದುಬೈ: ಯುಎಇಯಲ್ಲಿ ಈದುಲ್ ಫಿತರ್ ರಜೆ ಗೋಷಿಸಲಾಗಿದ್ದು, ಸರಕಾರಿ ವಲಯದ ಸಿಬ್ಬಂದಿಗೆ ಜೂನ್ 2 ರಿಂದ 9ರ ವರೆಗೆ ಈದ್ ರಜೆ ಲಭಿಸಲಿದೆ. ವಾರದ ರಜೆಗಳು ಸೇರಿ ಒಂಬತ್ತು ದಿವಸಗಳ ರಜೆ ಲಭಿಸಲಿದೆ.

ಖಾಸಗಿ ವಲಯದ ಸಿಬ್ಬಂದಿ ಗೆ ನಾಲ್ಕು ದಿನ ರಜೆ ಲಭಿಸಲಿದ್ದು, ರಮಝಾನ್ 29ರಿಂದ ಶವ್ವಾಲ್ ಮೂರರ ವರೆಗೆ ರಜೆ ಘೋಷಿಸಲಾಗಿದೆ. ಚಂದ್ರ ದರ್ಶನದ ಆಧಾರದಲ್ಲಿ ಜೂನ್ ಮೂರರಿಂದ ಆರು ಅಥವಾ ಏಳರ ವರಗೆ ರಜೆ ಲಭಿಸಲಿದೆ.

ಯುಎಇ ಮಂತ್ರಿಮಂಡಲವು ಸರಕಾರೀ ವಲಯದ ರಜೆ ಘೋಷಿಸಿದ್ದು, ಈ ಹಿಂದೆ ಖಾಸಗಿ ಮತ್ತು ಸರಕಾರಿ ವಲಯದ ರಜಾ ದಿನಗಳನ್ನು ಏಕೀಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿತ್ತು. ಆದರೆ ಮಾನವ ಸಂಪನ್ಮೂಲ ಸಚಿವಾಲಯವು ಈ ಬಾರಿ ಖಾಸಗಿ ವಲಯದಲ್ಲಿ ನಾಲ್ಕು ದಿನಗಳ ರಜೆಯನ್ನು ಘೋಷಣೆ ಮಾಡಿದೆ.

error: Content is protected !! Not allowed copy content from janadhvani.com