ದುಬೈ: ಯುಎಇಯ ರಸ್ತೆಗಳಲ್ಲಿ ಸ್ಪರ್ಧಾತ್ಮಕ ಚಾಲನೆಯನ್ನು ಅನುಮತಿಸಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ದುಬೈ ಮತ್ತು ಅಬುಧಾಬಿ ಪೊಲೀಸರು ಜಂಟಿಯಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ರೇಸಿಂಗ್ ನ ಅಪಾಯದ ಕುರಿತು ಎಚ್ಚರಿಕೆ ನೀಡಿದ್ದಾರೆ.
ರಮಝಾನ್ ಪ್ರಾರಂಭವಾದ ನಂತರ ನಾಲ್ಕನೇ ದಿನ ಸ್ಪರ್ಧಾತ್ಮಕ ಚಾಲನೆ ಮೂಲಕ ಉಂಟಾದ ಅಪಘಾತದಿಂದಾಗಿ ನಾಲ್ವರು ಅಲ್ ಐನ್ನಲ್ಲಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದರು. ಅಂತಹ ಚಾಲನೆ ಮಾಡುವವರಿಗೆ 2000 ದಿರ್ಹಂ ದಂಡ ಮತ್ತು 23 ಬ್ಲ್ಯಾಕ್ ಪಾಯಿಂಟ್ ಲಭಿಸಲಿದೆ ಎಂದು ದುಬೈ-ಅಬುಧಾಬಿ ಪೊಲೀಸರು ತಿಳಿಸಿದ್ದು, ಅರುವತ್ತು ದಿನಗಳ ವರೆಗೆ ವಾಹನವನ್ನು ಮುಟ್ಟುಗೋಲು ಮಾಡಲಾಗುವುದು.
ಅದೂ ಅಲ್ಲದೆ, ಅನುಮತಿ ರಹಿತವಾಗಿ ವಾಹನದ ಇಂಜಿನ್ನಲ್ಲಿ ಬದಲಾವಣೆ ಮಾಡಿದರೆ 1000 ದಿರ್ಹಂ ದಂಡ ಮತ್ತು 12 ಬ್ಲ್ಯಾಕ್ ಪಾಯಿಂಟ್ ನೀಡಲಾಗುವುದು. ವಾಹನವನ್ನು ಒಂದು ತಿಂಗಳು ಮುಟ್ಟುಗೋಲು ಮಾಡಲಾಗುವುದು.
ರಮಝಾನ್ ತಿಂಗಳಲ್ಲಿ ರಾತ್ರಿ ವೇಳೆಯಲ್ಲಿ ಸ್ಪರ್ಧಾ ರೇಸಿಂಗ್ ನಡೆಸುವ ಬಗ್ಗೆ ಗಮನಕ್ಕೆ ಬಂದಿದ್ದು, ವಾಸವಲಯ ಮತ್ತು ಹೈವೇಗಳಲ್ಲಿ ರೇಸಿಂಗ್ ನಡೆಸುವವರು ಸ್ವತ ಜೀವ ಮಾತ್ರವಲ್ಲದೆ ಇತರರ ಜೀವ ಮತ್ತು ರಸ್ತೆ ಸುರಕ್ಷೆಗೆ ಕಂಟಕವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ