ಮಕ್ಕಾ: ಮಕ್ಕಾದ ಪವಿತ್ರ ಹರಮ್ ಶರೀಫಿನ ದ್ವಾರಕ್ಕೆ ಹೊಂದಿಕೊಂಡಿರುವ ವಿಶ್ವವನ್ನೇ ಬೆರಗುಗೊಳಿಸುವ ಗಡಿಯಾರ ಗೋಪುರ ಮ್ಯೂಸಿಯಮನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ನಾಲ್ಕು ಅಂತಸ್ತುಗಳಲ್ಲಿ ಮ್ಯೂಸಿಯನ್ನು ಸಜ್ಜುಗೊಳಿಸಲಾಗಿದ್ದು, ಪ್ರತೀ ದಿನ ಅಪರಾಹ್ನ 1ರ ನಂತರ ಮತ್ತು ರಾತ್ರಿ 10ರ ಬಳಿಕ ಸಂದರ್ಶಕರಿಗೆ ಮ್ಯೂಸಿಯಂಗೆ ಪ್ರವೇಶವಿದೆ. ಈ ಗಡಿಯಾರ ಗೋಪುರವು ಸೌದಿ ಅರೇಬಿಯಾದ ಅತೀ ದೊಡ್ಡ ಗೋಪುರವಾಗಿದ್ದು, ದುಬೈಯ ಬುರ್ಜ್ ಖಲೀಫಾದ ನಂತರ ವಿಶ್ವದ ಎರಡನೇ ಅತೀ ದೊಡ್ಡ ಗೋಪುರವೂ ಇದಾಗಿದೆ.
ವಿಶ್ವದ ಸತ್ಯಗಳನ್ನು ಪಾರದರ್ಶಕವಾಗಿ ನಾಲ್ಕು ಮಹಡಿಗಳಲ್ಲಿ ಸಂದರ್ಶಕರಿಗೆ ಸಜ್ಜುಗೊಳಿಸಲಾದ ಈ ಮ್ಯೂಸಿಯಂನ ಒಂದನೇ ಮಹಡಿಯಲ್ಲಿ ಸೂರ್ಯ ಮತ್ತು ಚಂದ್ರನ ಕಕ್ಷೆಯ ಕುರಿತು ಮಾಹಿತಿ ಇದ್ದು, ಎರಡನೇ ಅಂತಸ್ತಿನಲ್ಲಿ ಪುರಾತನ ಕಾಲಘಟ್ಟದಲ್ಲಿ ಸಮಯ ನಿರ್ಣಯ ಮಾಡುತ್ತಿದ್ದ ಕುರಿತು ಮಾಹಿತಿ ನೀಡುತ್ತದೆ.
ಮೂರನೇ ಮಹಡಿಯಲ್ಲಿ ಗಡಿಯಾರ ಗೋಪುರದ ವೀಕ್ಷಣೆಗಳು ಮತ್ತು ನಾಲ್ಕನೇ ಮಹಡಿಯಲ್ಲಿ ನಕ್ಷತ್ರ, ಗ್ರಹಗಳು ಮುಂತಾದವುಗಳ ಕುರಿತು ವಿವರಣೆಯನ್ನು ದರ್ಶಿಸಬಹುದಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ