ಮಕ್ಕಾ: ವಿಶ್ವವನ್ನೇ ಬೆರಗುಗೊಳಿಸುವ ಗಡಿಯಾರ ಗೋಪುರ ಮ್ಯೂಸಿಯಂ- ಸಾರ್ವಜನಿಕರಿಗೆ ಮುಕ್ತ

ಮಕ್ಕಾ: ಮಕ್ಕಾದ ಪವಿತ್ರ ಹರಮ್ ಶರೀಫಿನ ದ್ವಾರಕ್ಕೆ ಹೊಂದಿಕೊಂಡಿರುವ ವಿಶ್ವವನ್ನೇ ಬೆರಗುಗೊಳಿಸುವ ಗಡಿಯಾರ ಗೋಪುರ ಮ್ಯೂಸಿಯಮನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ನಾಲ್ಕು ಅಂತಸ್ತುಗಳಲ್ಲಿ ಮ್ಯೂಸಿಯನ್ನು ಸಜ್ಜುಗೊಳಿಸಲಾಗಿದ್ದು, ಪ್ರತೀ ದಿನ ಅಪರಾಹ್ನ 1ರ ನಂತರ ಮತ್ತು ರಾತ್ರಿ 10ರ ಬಳಿಕ ಸಂದರ್ಶಕರಿಗೆ ಮ್ಯೂಸಿಯಂಗೆ ಪ್ರವೇಶವಿದೆ. ಈ ಗಡಿಯಾರ ಗೋಪುರವು ಸೌದಿ ಅರೇಬಿಯಾದ ಅತೀ ದೊಡ್ಡ ಗೋಪುರವಾಗಿದ್ದು, ದುಬೈಯ ಬುರ್ಜ್ ಖಲೀಫಾದ ನಂತರ ವಿಶ್ವದ ಎರಡನೇ ಅತೀ ದೊಡ್ಡ ಗೋಪುರವೂ ಇದಾಗಿದೆ.ವಿಶ್ವದ ಸತ್ಯಗಳನ್ನು ಪಾರದರ್ಶಕವಾಗಿ ನಾಲ್ಕು ಮಹಡಿಗಳಲ್ಲಿ ಸಂದರ್ಶಕರಿಗೆ ಸಜ್ಜುಗೊಳಿಸಲಾದ ಈ ಮ್ಯೂಸಿಯಂನ ಒಂದನೇ ಮಹಡಿಯಲ್ಲಿ ಸೂರ್ಯ ಮತ್ತು ಚಂದ್ರನ ಕಕ್ಷೆಯ ಕುರಿತು ಮಾಹಿತಿ ಇದ್ದು, ಎರಡನೇ ಅಂತಸ್ತಿನಲ್ಲಿ ಪುರಾತನ ಕಾಲಘಟ್ಟದಲ್ಲಿ ಸಮಯ ನಿರ್ಣಯ ಮಾಡುತ್ತಿದ್ದ ಕುರಿತು ಮಾಹಿತಿ ನೀಡುತ್ತದೆ.
ಮೂರನೇ ಮಹಡಿಯಲ್ಲಿ ಗಡಿಯಾರ ಗೋಪುರದ ವೀಕ್ಷಣೆಗಳು ಮತ್ತು ನಾಲ್ಕನೇ ಮಹಡಿಯಲ್ಲಿ ನಕ್ಷತ್ರ, ಗ್ರಹಗಳು ಮುಂತಾದವುಗಳ ಕುರಿತು ವಿವರಣೆಯನ್ನು ದರ್ಶಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!