ರಿಯಾದ್: ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬದಿಯ ಸಮಿತಿ ವಾರ್ಷಿಕ ಮಹಾಸಭೆ ಹಾಗೂ ಸ್ವಲಾತ್ ವಾರ್ಷಿಕವು ಮೇ 3 ಗುರುವಾರದಂದು ಬಶೀರ್ ಮೂರುಗೋಳಿ ಅವರ ವಿಲ್ಲಾದಲ್ಲಿ ನಡೆಯಿತು.
ಬದಿಯ ಸಮಿತಿ ಅಧ್ಯಕ್ಷರಾದ ಅಮೀರ್ ಕಲ್ಲಾಪು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಬೂಬಕ್ಕರ್ ಸಖಾಫಿ ಆಲಂಗಾರ್ ಕಿರಾಅತ್ ಪಠಿಸಿ, ಶಫೀಕ್ ಅಹ್ಸನಿ ಪಟ್ಲ ಸಭೆಯನ್ನು ಅಲ್ಲಾಹನ ನಾಮದೊಂದಿಗೆ ಉಧ್ಘಾಟಿಸಿದರು. ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಜನರಲ್ ಮೆನೇಜರ್ ಅಶ್ರಫ್ ಸಖಾಫಿ ಮಾಡಾವು ಸ್ವಲಾತ್ ನೇತೃತ್ವವನ್ನು ವಹಿಸಿ ಸ್ಥಾಪನೆಯ ಸಂಪೂರ್ಣ ವಿವರ ಹಾಗೂ ಚಿತ್ರಣವನ್ನು ಸವಿವರವಾಗಿ ನಾಯಕರ ಮುಂದೆ ವಿವರಿಸಿದರು.

ರಾಷ್ಟ್ರೀಯ ಅಧ್ಯಕ್ಷರಾದ ಯೂಸುಫ್ ಹಾಜಿ ಕಳಂಜಿಬೈಲ್, ರಾಷ್ಟ್ರೀಯ ಗೌರವಾಧ್ಯಕ್ಷರಾದ ಅಬ್ದುರ್ರಝ್ಝಾಕ್ ಹಾಜಿ ಉಜಿರೆ, ಹಯ್ಯಿಲ್ ಮುರೂಜ್ ಪ್ರ, ಕಾರ್ಯದರ್ಶಿ ದಾವೂದ್ ಸಅದಿ, ಅಧ್ಯಕ್ಷರಾದ ಹಮೀದ್ ಮಡಂತಿಲ ಮೊದಲಾದವರು ಆಶಂಸ ಭಾಷಣ ಮಾಡಿದರು.
2018-19 ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಸಮಿತಿ ಕಾರ್ಯದರ್ಶಿ ಬಶೀರ್ ಮೂರುಗೋಳಿ ವಾಚಿಸಿದರು.
ನಂತರ ಹೊಸ ಬದಿಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಉಮ್ಮರ್ ಹಾಜಿ ಅಳಕೆಮಜಲ್ ರವರನ್ನು ಮರು ಆಯ್ಕೆ ಮಾಡಿ 2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಮೀರ್ ಕಲ್ಲಾಪು, ಉಪಾಧ್ಯಕ್ಷರುಗಳಾಗಿ ಕಬೀರ್ ಕೃಷ್ಣಾಪುರ, ಹಮೀದ್ ಮಠ, ಪ್ರಧಾನ ಕಾರ್ಯದರ್ಶಿ ಬಶೀರ್ ಮೂರುಗೋಳಿ, ಕೋಶಾಧಿಕಾರಿ ಖಾದರ್ ಹಾಜಿ ಮಠ, ಕಾರ್ಯದರ್ಶಿಗಳಾಗಿ ರಿಯಾ ನೆಲ್ಯಾಡಿ, ಅಬೂಬಕ್ಕರ್ ಸಖಾಫಿ ಆಲಂಗಾರ್,
ಸಲಹೆಗಾರರಾಗಿ ಹಮೀದ್ ಮುಲ್ಕಿ, ಮಜೀದ್ ವಿಟ್ಲ, ಸಂಚಾಲಕರಾಗಿ ಇಸ್ಮಾಯಿಲ್ ಕಳಂಜಿಬೈಲ್, ಸಂಘಟನಾ ಕಾರ್ಯದರ್ಶಿ ಶಫೀಕ್ ಅಹ್ಸನಿ ಪಟ್ಲ, ಹಾಗೂ ಮುಸ್ತಫ ಸಾಸ್ತಾನ, ಶಾಫಿ ಮುರ, ಸಲೀಂ ಮಠ, ಮುಸ್ತಫ ಮಠ, ಇಬ್ರಾಹಿಂ ಬಕಾಲ, ಇರ್ಫಾನ್ ಲಬನ್ ಅಝೀಝ್ ಕಿನ್ನಿಗೋಳಿ, ಮುಂತಾದವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ, ಎಎಂಎಂ ಬತ್ತಾ ಅಧ್ಯಕ್ಷರಾದ ಅಬ್ದುರ್ರಝ್ಝಾಕ್ ಹಾಜಿ ಮಾಚಾರ್, ಹೈದರ್ ಹಾಜಿ ಉಪಾಧ್ಯಕ್ಷರು ಮಸ್ನ, ಮುಂತಾದವರು ಉಪಸ್ಥಿತರಿದ್ದರು.
ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ