janadhvani

Kannada Online News Paper

ಕೋಟಿಯ ಕೋಟು ತೊಟ್ಟು ವಿದೇಶ ಸುತ್ತುವವರು ಶೋಕಿದಾರ- ಚೌಕೀದಾರ ಅಲ್ಲ

ಚಿತ್ರದುರ್ಗ : ಕೋಟಿ ಮೌಲ್ಯದ ಕೋಟು ತೊಟ್ಟು ವಿದೇಶ ಸುತ್ತುವ ಅವರು ಶೋಕಿದಾರರರೇ ಹೊರತು ಚೌಕೀದಾರ ಅಲ್ಲ ಎಂದು ಮಾಜಿ ಸಚಿವ ಹೆಚ್ ಅಂಜನೇಯ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.

ತಾಲೂಕಿನ ಮಾಳಪ್ಪನಹಟ್ಟಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಬಹಿರಂಗ ಸಭೆಯಲ್ಲಿ ಅವರು ಪ್ರಧಾನಿ ಮೋದಿ ಅವರು ಐಷರಾಮಿ ಜೀವನ ನಡೆಸುತ್ತಿದ್ದಾರೆ, ಪ್ರತಿನಿತ್ಯ ಮೂರು ಸಾರಿ ಬಟ್ಟೆ ಬದಲಾಯಿಸ್ತಾರೆ ಚಿತ್ರದುರ್ಗದ ಸಮಾವೇಶ ಮುಗಿಸಿ ಹೊರಡುವ ವೇಳೆ ಅವರ ಉಡುಗೆ ಬದಲಾಗುತ್ತದೆ, ಇದಕ್ಕಂತೆ ಕೋಟಿ ಕೋಟಿ ಹಣ ವ್ಯಯ ಮಾಡ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಸಮಸ್ಯೆ ಅರಿತ ಸಿದ್ದರಾಮಯ್ಯ ಅವರು ರೈತರ ಸಾಲ ,ಮನ್ನಾ ಮಾಡಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಿದರು. ನರೇಂದ್ರ ಮೋದಿಗೆ ರೈತರು, ಬಡವರು, ಕೂಲಿ ಕಾರ್ಮಿಕರ ಕಷ್ಟ ಅರ್ಥವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.