janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಚಾರಾರ್ಥ ಗುರುವಾಯನಕೆರೆ ಯಲ್ಲಿ ಪಬ್ಲಿಸಿಟಿ ಕನ್ವೆನ್ಷನ್

ಈ ವರದಿಯ ಧ್ವನಿಯನ್ನು ಆಲಿಸಿ


ಗುರುವಾಯನಕೆರೆ.ಜ 23 :ಕರ್ನಾಟಕದಲ್ಲಿರುವ ಸುಮಾರು ತೊಂಬತ್ತು ಲಕ್ಷ ಮುಸಲ್ಮಾನರ ಧಾರ್ಮಿಕ ,ಶೈಕ್ಷಣಿಕ ,ಸಾಮಾಜಿಕ, ರಾಜಕೀಯ, ಆರ್ಥಿಕ ಅಭಿವೃದ್ಧಿಯ ಲಕ್ಷ್ಯದೊಂದಿಗೆ ದಿನಾಂಕ 27.01.2019 ನೇ ಆದಿತ್ಯವಾರದಂದು ಸಂಜೆ 4 ಕ್ಕೆ ಸರಿಯಾಗಿ ಬೆಂಗಳೂರಿನ ಮಿಲ್ಲರ್ಸ್ ರೋಡ್ ನಲ್ಲಿರುವ ಹಳೆ ಹಜ್ಜ್ ಕ್ಯಾಂಪಿನಲ್ಲಿ ನಡೆಯುವ ಬೃಹತ್ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಚಾರಾರ್ಥ SMA ಗುರುವಾಯನಕೆರೆ ಝೋನಲ್ ವತಿಯಿಂದ ಪಬ್ಲಿಸಿಟಿ ಕನ್ವೆನ್ಷನ್ ಗುರುವಾಯನಕೆರೆ ಮದ್ರಸ ಹಾಲ್ ನಲ್ಲಿ SMA ಝೋನ್ ಅಧ್ಯಕ್ಷ ಬದ್ರುದ್ದೀನ್ ಪರಪ್ಪು ರವರ ಅಧ್ಯಕ್ಷತೆ ಯಲ್ಲಿ SMA ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿಯವರ ಪ್ರಾರ್ಥನೆ ಯೊಂದಿಗೆ ನಡೆಯಿತು.

SJM ಜಿಲ್ಲಾ ಕಾರ್ಯದರ್ಶಿ ಆದಂ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.ಎಸ್ .ಎಂ. ಎ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗ್ಯಾ ಮುಖ್ಯ ಭಾಷಣ ಮಾಡಿದರು.ಸ್ಥಳೀಯ ಸಹಾಯಕ ಖತೀಬ್ ಶರೀಫ್ ಸಅದಿ,ಮುದರ್ರಿಸ್ ಹಾಮಿದ್ ಸಅದಿ ,ಅಬ್ದುರ್ರಹ್ಮಾನ್ ಬಾಖವಿ ಜಾರಿಗಬೈಲು, ಎ.ಕೆ ಅಹಮದ್ ಎರುಕಡಪು,ಯಾಕೂಬ್ ಮುಸ್ಲಿಯಾರ್ ಜಿ.ಕೆರೆ, ಮುಹಮ್ಮದ್ ರಫೀಕ್ ಅಹ್ಸನಿ, ಮುಹಮ್ಮದ್ ವೇಣೂರು, ಮೊದಲಾದವರು ಉಪಸ್ಥಿತರಿದ್ದರು.

SMA ಝೋನ್ ಕಾರ್ಯದರ್ಶಿ ಅಶ್ರಫ್ ಹಿಮಮಿ ಸ್ವಾಗತಿಸಿ,SMA ಬೆಳ್ತಂಗಡಿ ರೀಜನಲ್ ಪ್ರ.ಕಾರ್ಯದರ್ಶಿ NM ಶರೀಫ್ ಸಖಾಫಿ ವಂದಿಸಿದರು.

error: Content is protected !! Not allowed copy content from janadhvani.com