janadhvani

Kannada Online News Paper

ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ- ಮುಸ್ಲಿಂ ಉಲಮಾಗಳ ಸಭೆ

ಬೆಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶವು ಇದೇ ಬರುವ ದಿನಾಂಕ 27.1.2019 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಇದರ ಪೂರ್ವಭಾವಿಯಾಗಿ ಬೆಂಗಳೂರಿನ ಉಲಮಾ ನಾಯಕರ ಸಭೆಯು ಕ್ವೀನ್ಸ್ ರೋಡ್ ನಲ್ಲಿರುವ ದಾರುಸ್ಸಲಾಂ ಅಡಿಟೋರಿಯಂ ನಲ್ಲಿ ಇಂದು ನಡೆಯಿತು.

ನಗರದ ಪ್ರಮುಖ ನೂರು ವಿದ್ವಾಂಸರ ಸಭೆಯನ್ನು ಕರೆಯಲಾಗಿತ್ತು. ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಯಶಸ್ವಿ ಮತ್ತು ಮುಸ್ಲಿಂ ಜಮಾಅತ್ ಬೆಂಗಳೂರು‌ ಸಮಿತಿಯ ಬಗ್ಗೆ ಚರ್ಚೆ ನಡೆಸಲಾಯಿತು. ಕರ್ನಾಟಕ ಮುಸ್ಲಿಂ ಸಮುದಾಯದ ಸ್ಥಿತಿಗತಿ ಮತ್ತು ಉಲಮಾಗಳ ಜವಾಬ್ದಾರಿಯ ಬಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ಕೋರ್ಡಿನೇಟರ್ ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಮಾತನಾಡಿದರು.

ಸಭೆಯಲ್ಲಿ ಮುಫ್ತಿಯೇ ಕರ್ನಾಟಕ್ ಮುಫ್ತಿ ಅನ್ವರಲಿ ಸಾಬ್, ಜನಾಬ್ ಅಮೀರ್ ಜಾನ್ ಸಾಬ್ ಫೌಂಡರ್ ಹಝ್ರತ್ ಜಾಮಿಯಾ ಬಿಲಾಲ್ ಬೆಂಗಳೂರು, ಹಝ್ರತ್ ಅಲ್ಲಾಮ ಕಲೀಂ ತಹ್ರೀ ಸಾಬ್, ಅಲ್ಲಾಮ ಮೌಲಾನ ಶರೀಫ್ ರಹ್ಮಾನ್ ಸಾಬ್, ಹಝ್ರತ್ ಮೌಲಾನ ಖಾರಿಜುಲ್ ಫಿಖಾ ಸಾಬ್, ಹಝ್ರತ್ ಮೌಲಾನ ಶಬೀರ್ ಅಹ್ಮದ್ ರಝೀ ಸಾಬ್, ಹಝ್ರತ್ ಮೌಲಾನ ಮುಫ್ತಿ ಅಸ್ಲಂ ಮಿಸ್ಬಾಹಿ, ಹಝ್ರತ್ ಅಲ್ಲಾಮ ಮೌಲಾನ ರಫೀಕ್ ಅಹ್ಮದ್ ಸಾಬ್ ಅಝ್ಹರಿ, ಹಝ್ರತ್ ಅಲ್ಲಾಮ ಮೌಲಾನ ಮುಖ್ತಾರ್ ಅಹ್ಮದ್ ಸಾಬ್, ರಾಜ್ಯ ಎಸ್ ವೈ ಎಸ್ ಕಾರ್ಯದರ್ಶಿ ಯಾಕೂಬ್ ಶಿವಮೊಗ್ಗ, ಬೆಂಗಳೂರು ಎಸ್ ವೈ ಎಸ್ ಅಧ್ಯಕ್ಷ ಬಶೀರ್ ಸ ಅದಿ, ಕೊಡಗು ಜಿಲ್ಲಾ ವಕ್ಫ್ ಮಾಜಿ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಉಪಾಧ್ಯಕ್ಷ ಇಸ್ಮಾಯಿಲ್ ಸ ಅದಿ ಕಿನ್ಯ, ಹಬೀಬ್ ನಾಳ, ಹಬೀಬ್ ಕೋಯ ಕಾರವಾರ ಮುಂತಾದವರು ಭಾಗವಹಿಸಿದರು.