ಕೊಡಗು: ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾಕೇಂದ್ರ ಅನ್ವಾರುಲ್ ಹುದಾ ಕಾಲೇಜ್ ಆಫ್ ಇಂಟಿಗ್ರೇಟೆಡ್ ಸ್ಟಡೀಸ್ನಲ್ಲಿ ಸಪ್ತ ವರ್ಷ ಮತ-ಲೌಕಿಕ ಶಿಕ್ಷಣ ಪಡೆದ ಅನ್ವಾರಿಗಳ ಸಂಗಮವು ಜನವರಿ 5 ರಂದು ಸಂಸ್ಥೆಯಲ್ಲಿ ನಡೆಯಿತು.
ಮದ್ಯಾಹ್ನ 2 ಘಂಟೆಗೆ ಸಂಸ್ಥೆಯ ಸಾರಥಿ ಶೖೆಖುನಾ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ‘ಅನ್ವಾರೀಸ್ ಅಲಯನ್ಸ್’ನ ಅರ್ಧ ವಾರ್ಷಿಕ ಕೌನ್ಸಿಲ್ ನಡೆಯಿತು.ಸಂಜೆ 6.30 ಕ್ಕೆ ಸಂಸ್ಥೆಯ ಪ್ರಾಂಶುಪಾಲರಾದ ಅಬ್ದುರ್ರಶೀದ್ ಸಅದಿ ಉಸ್ತಾದರ ಅದ್ಯಕ್ಷತೆಯಲ್ಲಿ ವಿದ್ಯಾರ್ಥಿಗಳ ಸೆಮಿನಾರ್ ನಡೆಯಿತು.
ಸಂಸ್ಥೆಯ ಮುದರ್ರಿಸರಾದ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದರು ಪ್ರಾರ್ಥನೆ ನಡೆಸಿ ಸಂಘಟನೆಯ ಕಾರ್ಯದರ್ಶಿ ಮುಹಮ್ಮದ್ ಶಾಫಿ ಅನ್ವಾರಿ ಅಸ್ಸಖಾಫಿ ಸ್ವಾಗತ ಭಾಷಣ ಮಾಡಿದರು. ಹಂಶಾದ್ ಅನ್ವಾರಿ ಅಸ್ಸಅದಿ ಅಲ್-ಅಫ್ಲಲಿರವರು ಕಿರಾಅತ್ ಪಠಿಸಿ ಸಯ್ಯಿದ್ ಸಮೀಹ್ ಅನ್ವಾರಿ ಅಲ್ ಹೖೆದ್ರೂಸಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಹಮ್ಮದ್ ರಾಶಿದ್ ಅನ್ವಾರಿಯವರು ‘ಅಹ್ಲುಲ್ ಅಬಾ’ , ನಜ್ಮುದ್ದೀನ್ ಅನ್ವಾರಿ ಅಲ್ ಅಝ್ಹರಿರವರು ‘ಲಿಂಗ ಬದಲಾವಣೆ ಇಸ್ಲಾಮಿನಲ್ಲಿ’ ಮತ್ತು ಮುಹಮ್ಮದ್ ಸಲೀಂ ಅನ್ವಾರಿ ‘ಸಯ್ಯಿದುನಾ ಮುಹಮ್ಮದ್ ಮುಸ್ತಫಾ (ಸಲ್ಲಲ್ಲಾಹು ಅಲೖೆಹಿ ವಸಲ್ಲಂ) ಇತರ ಗ್ರಂಥಗಳಲ್ಲಿ’ ಎಂಬ ವಿಷಯದ ಕುರಿತು ವಿಷಯ ಮಂಡಿಸಿದರು. ನಂತರ ಶೖೆಖುನಾ ಅಹ್ಸನಿ ಉಸ್ತಾದರು ಸೆಮಿನಾರ್ ನಿರೂಪಿಸಿ ಅಭಿನಂದನಾ ಭಾಷಣ ಮಾಡಿದರು.
ಸಂಸ್ಥೆಯ ಮುದರ್ರಿಸರಾದ ಇಸ್ಮಾಯಿಲ್ ಸಖಾಫಿ, ಉಸ್ತಾದ್ ಶಫೀಕ್ ಸಖಾಫಿ, ಉಸ್ತಾದ್ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್, ಜಲೀಲ್ ಸಖಾಫಿ ಉಸ್ತಾದ್, ಯಾಕೂಬ್ ಮಾಸ್ಟರ್, ಶಕೀರ್ ಮಾಸ್ಟರ್ ಮತ್ತು ಇಬ್ರಾಹಿಂ ಮಾಸ್ಟರ್ ಅನ್ವಾರಿಗಳಿಗೆ ಹಿತೋಪದೇಶವನ್ನು ನೀಡಿದರು.
SSF ಸಾಂಘಿಕ ನಾಯಕರಾದ ಅನ್ವಾರಿಗಳಿಗೆ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಮರುದ್ದೀನ್ ಅನ್ವಾರಿ ಅಸ್ಸಖಾಫಿರವರ ಮದ್ಹ್ ಆಲಾಪನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.