janadhvani

Kannada Online News Paper

ಕೆ.ಸಿ.ಎಫ್ ದಮ್ಮಾಮ್ ಝೋನಲ್ ಸ್ನೇಹ ಸಂಗಮ ಹಾಗೂ ಪ್ರತಿಭೋತ್ಸವ

ದಮ್ಮಾಮ್:ಅನಿವಾಸಿ ಕನ್ನಡಿಗರ ಅಭಿಮಾನ ಶಬ್ಧವಾದ ಕೆ.ಸಿ.ಎಫ್ ದಮ್ಮಾಮ್ ಝೋನ್ ವತಿಯಿಂದ ಸ್ನೇಹ ಸಂಗಮ ಮತ್ತು ಪ್ರತಿಭೋತ್ಸವ ಕಾರ್ಯಕ್ರಮ ಸೈಹಾತ್ ಇಸ್ತಿರಾದಲ್ಲಿ ದಿನಾಂಕ 07/12/18 ರಂದು  ನಡೆಯಿತು.

ಕಾರ್ಯಕ್ರಮದ ಪ್ರಥಮ ಭಾಗವಾಗಿ ಜುಮಾ ನಮಾಝಿನ ಬಳಿಕ ಕೆ.ಸಿ.ಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ಉಸ್ತಾದರ ನೇತೃತ್ವದಲ್ಲಿ ಪ್ರವಾದಿ ಕೀರ್ತನೆ ಮಜ್ಲಿಸ್ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.

ಅಸರ್ ನಮಾಝ್ ಬಳಿಕ ಕೆ.ಸಿ.ಎಫ್ ಕಾರ್ಯಕರ್ತರಿಗಾಗಿ ಸಂಘಟನಾ ತರಗತಿ ನಡೆಯಿತು, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಅಧ್ಯಕ್ಷರಾದ ಬೈತಾರ್ ಯೂಸುಫ್ ಸಖಾಫಿ ಕಾರ್ಯಕರ್ತರಿಗೆ ಇರಬೇಕಾದ ಗುಣಗಳನ್ನು ಮನೋಜ್ಞವಾಗಿ ವಿವರಿಸಿ ತರಗತಿ ನಡೆಸಿದರು.
ಸಂಜೆ 5ಕ್ಕೆ ಪ್ರತಿಭೋತ್ಸವ ಕಾರ್ಯಕ್ರಮ ಝೋನ್ ಅಧ್ಯಕ್ಷ ಕುಪ್ಪೆಟ್ಟಿ ಫಾರೂಖ್ ಮುಸ್ಲಿಯಾರ್ ರವರ ಸಭಾಧ್ಯಕ್ಷತೆಯಲ್ಲಿ, ಸೌದಿ ರಾಷ್ಟ್ರೀಯ ಸಮೀತಿ ಅಧ್ಯಕ್ಷ ಯೂಸುಫ್ ಸಖಾಫಿ ಉಸ್ತಾದರ ದುವಾದೊಂದಿಗೆ ಆರಂಭಗೊಂಡಿತು, ಝೋನ್ ಕೋಶಾಧಿಕಾರಿ ಮುಹಮ್ಮದ್ ಮಲಬೆಟ್ಟು ಸ್ವಾಗತಿಸಿದರು, ಝೋನ್ ಶಿಕ್ಷಣ ವಿಭಾಗದ ಚಯರ್ಮೇನ್ ಅಬ್ರುರ್ರಶೀದ್ ಸಖಾಫಿ ಮಿತ್ತೂರ್ ಸಭೆಯನ್ನು ಉದ್ಘಾಟನೆಗೈದರು,
ನಂತರ ಪ್ರತಿಭೋತ್ಸವ-18 ಸ್ಪರ್ಧಾ ಕಾರ್ಯಕ್ರಮ ಆರಂಭಗೊಂಡಿತು,
ಕಿರಾಅತ್,ಕನ್ನಡ ಭಾಷಣ,ಮಳಯಾಳಂ ಭಾಷಣ, ಕನ್ನಡ ಹಾಡು, ಮಳಯಾಳಂ ಹಾಡು, ಚರ್ಚಾ ಸ್ಪರ್ಧೆ, ಕ್ವಿಝ್, ಪ್ರಬಂಧ ಸ್ಪರ್ಧೆ, ಸಭಿಕರಿಗಾಗಿ ರಸ ಪ್ರಶ್ನೆ, ಇತ್ಯಾದಿ ಎಂಟಕ್ಕೂ ಮಿಕ್ಕ ನಡೆದ ಸ್ಪರ್ಧೆಯಲ್ಲಿ ದಮ್ಮಾಮ್ ಝೋನಿಗೊಳಪಟ್ಟ ದಮ್ಮಾಮ್ ಸೆಕ್ಕರ್, ಜುಬೈಲ್ ಸೆಕ್ಟರ್, ಕೋಬಾರ್ ಸೆಕ್ಟರ್, ಅಲ್ ಅಹ್ಸಾ ಸೆಕ್ಟರಿನ ಸ್ಪರ್ಧಾರ್ಥಿಗಳು ವಯೋಮಿತಿಯ ಭೇಧ ಭಾವ ಇಲ್ಲದೆ ಅತ್ಯುತ್ಸಾಹದಲ್ಲಿ ಪಾಲ್ಗೊಂಡು ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಪ್ರದರ್ಶಿಸಿದರು..
ದಮ್ಮಾಮ್ ಝೋನ್ ಶಿಕ್ಷಣ ವಿಭಾಗ ಚಯರ್ಮೇನ್ ಅಬ್ದುರ್ರಶೀದ್ ಸಖಾಫಿ ಮಿತ್ತೂರ್, ಹಾಗೂ ಝಿಯಾದ್ ಮಾಸ್ಟರ್ ಬಹಳ ಅಚ್ಚು ಕಟ್ಟಾಗಿ ಪ್ರತಿಭೋತ್ಸವ-18 ಕಾರ್ಯಕ್ರದ ನಿರೂಪಣೆಯನ್ನು ಮಾಡಿದರು,
ಸನ್ಮಾನ ಕಾರ್ಯಕ್ರಮ:- ಕಾರ್ಯಕ್ರಮದ ನಡುವೆ ವಿಶಿಷ್ಠ ಇಬ್ಬರು ವ್ಯಕ್ತಿಗಳನ್ನು ಸನ್ಮಾನಿಸಲಾಯಿತು, ಕೆ.ಸಿ.ಎಫ್ ಅಫ್ರಲ್ ಬಾತೀನ್ ಅಧ್ಯಕ್ಷ ಇಮ್ರಾನ್ ಮುಸ್ಲಿಯಾರ್ ಅನಾರೋಗ್ಯಕ್ಕೆ ತುತ್ತಾಗಿ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ದಾಖಲಾದಾಗ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ ಇಕ್ರಮುಲ್ಲ ಚೌದರಿ ವೈದ್ಯರನ್ನು ರೈಸ್ಕೋ ಅಬುಬಕ್ಕರ್, ಮುಹಮ್ಮದ್ ಮಲೆಬೆಟ್ಟು ಶಾಲು ಹೊದಿಸಿ ಝೋನಲ್ ಪರವಾಗಿ ಸನ್ಮಾನಿಸಿದರು ಮತ್ತು ಇನ್ನೊಬ್ಬ ವೈದ್ಯರಾದ ಅಹ್ಸಾನ್ ಚೀಮಾರವರನ್ನು ಅಬ್ದುಲ್ ಹಮೀದ್ ಅರಾಮಿಕ್ಸ್, ಅನ್ವರ್ ಗೂಡಿನ ಬಳಿ ಝೋನ್ ಸಮೀತಿಯ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು,
ಸನ್ಮಾನ ಸ್ವೀಕರಿಸಿ ಮಾತನಾಡಿದ ವೈದ್ಯರಿಬ್ಬರೂ ಕೆ.ಸಿ.ಎಫ್ ನ ಸಾಮುದಾಯಿಕ ಸಾಂತ್ವನ ಸೇವೆಯನ್ನು ಶ್ಲಾಘಿಸಿದರು, ಇನ್ಮುಂದೆಯೂ ನಿಮ್ಮ ಸಾಂತ್ವನ ಸೇವೆಗೆ ನಾವು ಸಹಾಯ ಮಾಡುತ್ತೆವೆಂದು ಭರವಸೆಯನ್ನು ನೀಡಿದರು,
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ :- ಕೆ.ಸಿ.ಎಫ್ ದಮ್ಮಾಮ್ ಝೋನ್ ಸ್ನೇಹ ಸಂಗಮ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ರಾತ್ರಿ 11:30ಕ್ಕೆ ಸರಿಯಾಗಿ ಝೋನ್ ಅಧ್ಯಕ್ಷ ಕುಪ್ಪೆಟ್ಟಿ ಫಾರೂಖ್ ಮುಸ್ಲಿಯಾರ್ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು, ಮುಹಮ್ಮದ್ ಸಖಾಫಿ ಸಾಲೆತ್ತೂರು ಕಿರಾಅತ್ ಪಠಿಸಿದರು, ದಮ್ಮಾಮ್ ಝೋನ್ ಸಮೀತಿ ಪ್ರ, ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸ್ವಾಗತಿಸಿದರು, ಐ.ಸಿ.ಎಫ್ ಸೈಹಾತ್ ಸೆಕ್ಟರ್ ಪ್ರ, ಕಾರ್ಯದರ್ಶಿ ಹಸೈನಾರ್ ಉಸ್ತಾದ್ ಉದ್ಘಾಟನೆಗೈದರು, ಕಾರ್ಯಕ್ರಮದಲ್ಲಿ ಅಲ್ ಮದೀನಾ ಮೂಡಡ್ಕ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡವು ಮುಖ್ಯ ಪ್ರಭಾಷಣ ಮಾಡುತ್ತಾ ಪ್ರವಾದಿ ಪ್ರೇಮದ ಹಾದಿ ಅದು ನಮ್ಮ ಸ್ವರ್ಗಕ್ಕಿರುವ ರಹದಾರಿ, ಸಜ್ಜನರ ಸತ್ಪಥದಲ್ಲಿ ಸಾಗಿ ಜೀವನವನ್ನು ಧನ್ಯಗೊಳಿಸೋಣ ಎಂದು ಹೇಳಿದರು….
ಕಾರ್ಯಕ್ರಮದಲ್ಲಿ ಪ್ರವಾಸಿ ಜೀವನ ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಸುನ್ನೀ ಸಂಘ ಕುಟುಂಬಗಳ ಹಿತೈಷಿಯೂ, ಸಹಾಹಿಯೂ ಆದ ಅನ್ವರ್ ಗೂಡಿನ ಬಳಿ, ಹಾಗೂ ಕೆ.ಸಿ.ಎಫ್ ನ ಪ್ರತಿಯೊಂದು ಕಾರ್ಯದಲ್ಲೂ ಪಾರದರ್ಶಕತೆಯೊಂದಿಗೆ ಕಾರ್ಯಾಚರಿಸುತ್ತಿರುವ ದಮ್ಮಾಮ್ ಝೋನ್ ಕೋಶಾಧಿಕಾರಿ ಮುಹಮ್ಮದ್ ಮಲೆಬೆಟ್ಟು ರವರನ್ನು ಸನ್ಮಾನಿಸಲಾಯಿತು, ನಂತರ ಪ್ರತಿಭೋತ್ಸವದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು, ಸ್ಪರ್ಧೆಯಲ್ಲಿ ಉನ್ನತ ಅಂಕ ಪಡೆದ ದಮ್ಮಾಮ್ ಸೆಕ್ಟರ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿದರೆ, ಪೈಪೋಟಿಯೊಂದಿಗೆ ಸ್ಪರ್ಧೆ ನಡೆಸಿದ ಜುಬೈಲ್ ಸೆಕ್ಟರ್ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿತು. ಸ್ಪರ್ಧೆಯಲ್ಲಿ ಉನ್ನತ ಪ್ರದರ್ಶನ ನೀಡಿದ ಅಮಾನುದ್ದೀನ್ ಕಾಟಿಪಳ್ಳ ವಯಕ್ತಿಕ ಚಾಂಪಿಯನ್ ಆಗಿ ಮಿಂಚಿದರು..
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಲ್ ಅಹ್ಸಾ ಸೆಕ್ಟರ್ ಕಾರ್ಯದರ್ಶಿ ಕೆ.ಎಂ ಇರ್ಶಾದ್ ಪಕ್ಷಿಕೆರೆ ಹಾಗೂ ದ್ವಿತೀಯ ಸ್ಥಾನ ಪಡೆದ ಉಮರ್ ಗೇರು ಕಟ್ಟೆ ಸೌದಿ ರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆಗೊಂಡರು,
ನಂತರ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಮುಮ್ತಾಝ್ ಅಲಿ ಕೃಷ್ಣಾಪುರ, ಅನ್ವರ್ ಗೂಡಿನ ಬಳಿ, ಐ.ಎನ್.ಸಿ ನೇತಾರ ಎನ್.ಎಸ್ ಅಬ್ದುಲ್ಲಾ, ಡಿ.ಕೆ.ಎಸ್ಸಿ ನಾಯಕ ಅಬ್ದುಲ್ ಹಮೀದ್ ಅರಾಮಿಕ್ಸ್, ಮರ್ಕಝುಲ್ ಹುದಾ ಕುಂಬ್ರ ಸೌದಿ ರಾಷ್ಟ್ರೀಯ ಅಧ್ಯಕ್ಷ ಫಾರೂಖ್ ಕನ್ಯಾನ ಆಶಂಸ ಭಾಷಣ ಮಾಡಿದರು, ವೇದಿಕೆಯಲ್ಲಿ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ರಾಷ್ಟ್ರೀಯ ಪ್ರ,ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ, ರೈಸ್ಕೋ ಅಬುಬಕ್ಕರ್ ಹಾಜಿ, ರಫೀಖ್ ಸೂರಿಂಜೆ, ಮುಹಮ್ಮದ್ ಕಮ್ಮರಡಿ ಮತ್ತಿತರು ಉಪಸ್ಥಿತರಿದ್ದರು,
ತೌಫೀಖ್ ಅಂಬಾಗಿಲು ಧನ್ಯವಾದಗೈದರು, ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.

error: Content is protected !! Not allowed copy content from janadhvani.com