ಮಾಣಿ : ಮಕ್ಕಳಿಗೆ ಶಿಸ್ತು,ಗೌರವ ಆದರಗಳ ಬಗ್ಗೆ ಕಲಿಸುವುದರೊಂದಿಗೆ ಪ್ರವಾದಿ ಸ್ನೇಹವನ್ನೂ ಕಲಿಸಿರಿ ಅಂತಹ ಮಕ್ಕಳು ಸಮಾಜಕ್ಕೆ ಕಂಟಕವಾಗಲಾರರು, ಪ್ರವಾದಿ(ಸ.ಅ)ರವರ ಗುಣಗಾನ ಹೇಳಿದಷ್ಟು ಮುಗಿಯುವಂತದ್ದು ಅಲ್ಲ,ಅಲ್ಲಾಹನು ತನ್ನ ಪವಿತ್ರ ಗ್ರಂಥಗಳಲ್ಲಿ ಗುಣಗಾನ ಮಾಡಿರುವ
ಸರಿಸಾಟಿಯಿಲ್ಲದ ಪ್ರೇಮದ ವ್ಯಕ್ತಿತ್ವ ಅದು,ಅವರನ್ನು ಹೃದಯದಿಂದ ಸ್ನೇಹ ಮಾಡುವ ಯಾರಿಂದಲೂ ಇನ್ನೊಬ್ಬರಿಗೆ ಕೇಡು ಉಂಟು ಮಾಡುವ ಪ್ರವೃತ್ತಿ ಉಂಟಾಗದು ಎಂದು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು, ಅವರು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ ಸೂರಿಕುಮೇರು ಪೆಟ್ರೋಲ್ ಬಂಕ್ ಮೈದಾನದಲ್ಲಿ ನಡೆದ ಬೃಹತ್ ಹುಬ್ಬುರ್ರಸೂಲ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದರು,ಗೌರವ ಆದರಗಳಲ್ಲಿ ಎಂದೆಂದಿಗೂ ಕುಂದು ಕೊರತೆ ಉಂಟಾಗದ ಅದ್ಭುತವಾಗಿರುತ್ತಾರೆ ಪ್ರವಾದಿ(ಸ.ಅ)ರವರು,ಅವರ ಸ್ಥಾನಮಾನಗಳಿಗೆ ಚ್ಯುತಿ ತರಲು ಯಾವುದೇ ವ್ಯಕ್ತಿಗಳಿಗೆ ಸಾಧ್ಯವಿರುವುದಿಲ್ಲ,ಅದು ಅಲ್ಲಾಹನು ನೀಡಿರುವ ವಿಶೇಷತೆಯಾಗಿರುತ್ತದೆ ಎಂದು ಮುಖ್ಯ ಪ್ರಭಾಷಣ ಮಾಡಿದ ರಫೀಕ್ ಸಅದಿ ದೇಲಂಪಾಡಿ ಹೇಳಿದರು,ಎಸ್ ವೈ ಎಸ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜಿಎಂಎಂ ಕಾಮಿಲ್ ಸಖಾಫಿ ಪೆರ್ನೆ ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಪ್ರಭಾಷಣದ ಬಳಿಕ ತ್ವಾಹಾ ತಂಙಳ್ ಪೂಕೊಟ್ಟೂರು ಬಳಗದಿಂದ ಆಕರ್ಷಕ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು,


ಶಾಹಿನ್ ತಾನೂರು ಇಶಲ್ ವಿರುನ್ನು ಹಾಗೂ ಮಾಸ್ಟರ್ ಶಿಹಾನ್ ನ’ಅತೇ ಶರೀಫ್ ನಡೆಸಿಕೊಟ್ಟರು,ವೇದಿಕೆಯಲ್ಲಿ ಅಸ್ಸಯ್ಯಿದ್ ಬನ್ನೂರು ತಂಙಳ್,ಶೆರೀಫ್ ಸಖಾಫಿ ದಾರುಲ್ ಇರ್ಶಾದ್,ರಶೀದ್ ಸಖಾಫಿ ಗಡಿಯಾರ್,ಖಾಸಿಂ ಹಾಜಿ ಮಿತ್ತೂರು,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಹನೀಫ್ ಸಖಾಫಿ ಪೇರಮೊಗರು,ಯಾಕೂಬ್ ಸಅದಿ ಅಲ್ ಅಫ್ಳಲಿ ದಾರುಲ್ ಇರ್ಶಾದ್,ಹೈದರ್ ಸಖಾಫಿ ಗಡಿಯಾರ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ,ಯೂಸುಫ್ ಹಾಜಿ ಸೂರಿಕುಮೇರು,ಪುತ್ತೂರು ದಾವಾ ವಿಂಗ್ ನೇತಾರರಾದ ಇಕ್ಬಾಲ್ ಬಪ್ಪಳಿಗೆ,ಸ್ವಾಲಿಹ್ ಮುರ,ಹನೀಫ್ ಸಂಕ ಸೂರಿಕುಮೇರು, ಮುಂತಾದ ಹಲವಾರು ಉಲಮಾ ಉಮರಾ ನೇತಾರರು ರಾಜಕೀಯ ನಾಯಕರು ಭಾಗವಹಿಸಿದ್ದರು,ಸೆಕ್ಟರ್ ಅಧ್ಯಕ್ಷ ಹಾಫಿಳ್ ತೌಸೀಫ್ ಕೆಮ್ಮಾನ್ ಸ್ವಾಗತಿಸಿದರು, ಹಾರಿಸ್ ಮದನಿ ಪಾಟ್ರಕೋಡಿ ಹಾಗೂ ಸ್ವಾದಿಖ್ ಮುಈನೀ ಗಡಿಯಾರ್ ಕಾರ್ಯಕ್ರಮ ನಿರೂಪಿಸಿದರು ಖಲಂದರ್ ಶೇರಾ ಹಾಗೂ ಮುಸ್ತಫಾ ಬುಡೋಳಿ ಧನ್ಯವಾದಗೈದರು.