ಯುಎಇ ಸಾರ್ವಜನಿಕ ಕ್ಷಮಾದಾನ ಡಿ.30 ರ ತನಕ ವಿಸ್ತರಣೆ

ದುಬೈ :ಸಾರ್ವಜನಿಕ ಕ್ಷಮಾದಾನವನ್ನು ಜಾರಿಗೊಳಿಸಲಾದ ಯುಎಇಯಲ್ಲಿ ಅಕ್ರಮವಾಗಿ ನೆಲೆಸಿದವರಿಗೆ ತಮ್ಮ ಸ್ವದೇಶಕ್ಕೆ ಮರಳಲು ಕ್ಷಮಾದಾನ ಅವಧಿಯನ್ನು ಈ ತಿಂಗಳ ಕೊನೆಯ ವರಗೆ ವಿಸ್ತರಿಸಲಾಗಿದೆ.

ದೇಶದ ರಾಷ್ಟ್ರೀಯ ದಿನಾಚರಣೆಯ ಹಿನ್ನಲೆಯಲ್ಲಿ ಸಾರ್ವಜನಿಕ ಕ್ಷಮಾದಾನವನ್ನು ವಿಸ್ತರಿಸಲಾಗಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ರಜೆ ನಿಮಿತ್ತ ಸ್ಥಗಿತಗೊಂಡಿದ್ದ ಕ್ಷಮಾದಾನ ಅರ್ಜಿಗಳ ವಿಲೇವಾರಿಯನ್ನು ಡಿ.4 ರಂದು  ಆರಂಭಿಸಲಾಗಿದ್ದು, ಅಕ್ರಮವಾಗಿ ಯುಎಇಯಲ್ಲಿ ನೆಲೆಸಿರುವ ವಿದೇಶಿಯರು ಕ್ಷಮಾದಾನದ ಪ್ರಯೋಜನವನ್ನು ಡಿಸೆಂಬರ್ 31ರವರೆಗೆ ಪಡೆದುಕೊಳ್ಳಬಹುದಾಗಿದೆ.

ಆಗಸ್ಟ್ ತಿಂಗಳಲ್ಲಿ ಜಾರಿಗೆ ತರಲಾಗಿದ್ದ ಮೂಲ ಯೋಜನೆಯು ಅಕ್ಟೋಬರ್ 31ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು 30 ದಿನಗಳ ಕಾಲ ವಿಸ್ತರಿಸಲಾಗಿತ್ತು ,ನವೆಂಬರ್ 30ರಂದು ಕೊನೆಗೊಳ್ಳಬೇಕಾಗಿದ್ದ ಸಾರ್ವಜನಿಕ ಕ್ಷಮಾದಾನವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ.

ಅಕ್ರಮವಾಗಿ ನೆಲೆಸಿರುವ ವಿದೇಶಿಯರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲು ಹಾಗೂ ಅವರಿಗೆ ದೇಶದಲ್ಲಿ ಕೆಲಸ ಮಾಡುವ ಅವಕಾಶ ನೀಡಲು ಯುಎಇ ಉತ್ಸುಕವಾಗಿದೆ ಎಂದು ಶಾರ್ಜಾ ವಲಸೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಖಲೀಜ್ ಟೈಮ್ಸ್’ಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!