ಕೆ ಸಿ ಫ್ ಕತಾರ್: ಝೋನ್ ಮಟ್ಟದಲ್ಲಿ ಸ್ವಲಾತ್ ವಾರ್ಷಿಕ ಮತ್ತು ಮೀಲಾದ್ ಕಾರ್ಯಕ್ರಮ

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ಅಝೀಝಿಯ ಝೋನ್ ವತಿಯಿಂದ ” ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನವೆಂಬರ್ 30 ಶುಕ್ರವಾರ ಜುಮಾ ನಮಾಜಿನ ಬಳಿಕ ನಡೆಯಿತು.
ಸಂಘಟನಾ ವಿಭಾಗದ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ಯವರು ಉಧ್ಘಾಟಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ಯವರು ವಹಿಸಿದ್ದರು.
ಸ್ವಲಾತ್ ನ ನೇತೃತ್ವ ವನ್ನು ಹಾಫಿಲ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ಯವರು ವಹಿಸಿದ್ದರು.
ನಜೀರ್ ಸಖಾಫಿ ಮತ್ತು ತಂಡದವರಿಯು ಅತ್ಯಾಕರ್ಷಕ ಬುರ್ದಾ ಮಜ್ಲಿಸ್ ನಡೆಸಿಕೊಟ್ಟರು .


ಪ್ರತಿಭೋತ್ಸವ ದಲ್ಲಿ ವಿಜೇತರಾದವರಿಗೆ ಸಂಘಟನೆಯ ನೇತಾರರಾದ ಕಬೀರ್ ದೇರಳಕಟ್ಟೆ ಹಾಗೂ ಅಂದುಮಾಯಿ ನಾವುಂದ ಇವರ ಪ್ರಶಸ್ತಿ ವಿತರಣೆ ನೆರವೇರಿಸಿ ಕೊಟ್ಟರು.
ಅಲ್ಲದೆ ಪ್ರಸ್ತುತ ಝೋನ್ ನ ಹಿರಿಯ ಸದಸ್ಯ ಹಾಗೂ ಮಾದರಿ ಕಾರ್ಯಕರ್ತರಾದ ಇಬ್ರಾಹಿಂ ಮಲಾರ್ ರವರನ್ನು ಸನ್ಮಾನಿಸಲಾಯಿತು
ಅಝೀಝಿಯ ಝೋನ್ ಅಧ್ಯಕ್ಷರಾದ ಖಾಲಿದ್ ಹಿಮಮಿ ಯವರು ಸ್ವಾಗತಿಸಿ ಆಸೀಫ್ ಕರ್ಪಾಡಿ ಯವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಫಾರೂಕ್ ಕೃಷ್ಣಾಪುರ ರವರು ನಡೆಸಿ ಕೊಟ್ಟರು.
ಡಿಸೆಂಬರ್ ೩ ನೇ ತಾರೀಕಿನಂದು ಮಂಗಳೂರಿನ ನೆಹರೂ ಮೈದಾನ ದಲ್ಲಿ ನಡೆಯಲಿರುವ ಸಾಮುದಾಯಿಕ ಸಮ್ಮೇಳನದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.
ಅದೇ ದಿನ ಇಶಾ ನಮಾಜಿನ ಬಳಿಕ ದೋಹಾ ಜೋನ್ ನ ವತಿಯಿಂದ ಮೀಲಾದ್ ಕಾರ್ಯಕ್ರಮ ನಡೆಯಿತು.
ಖಾಲಿದ್ ಹಿಮಾಮಿ ಮೌಲಿದ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್ ಖತ್ತರ್ ನ್ಯಾಷನಲ್ ಕಮೀಟಿ ಸದಸ್ಯರಾದ ಕಬೀರ್ ದೇರಳಕಟ್ಟೆ ವಹಿಸಿದರು. ಸಂಘಟನಾ ಅಧ್ಯಕ್ಷರಾದ ಹಾಫಿಳ್ ಉಮರುಲ್ ಫಾರೂಕ್ ಸಖಾಫಿಯವರು ಯುವತ್ವ ಹಾಗು ಬಿಡುವಿನ ಸಮಯದ ಮಹತ್ವದ ಕುರಿತು ಮುಖ್ಯ ಪ್ರಭಾಷಣ ನಡೆಸಿ ದುಆ ಆಶೀರ್ವಚನಗೈದರು. ಮುಖ್ಯ ಅತಿಥಿಗಳಾಗಿ ಯೂಸುಫ್ ಸಖಾಫಿ,ಫಾರುಖ್ ಕೃಷ್ಣಾಪುರ,ಅಂದುಮಾಯಿ ನಾವುಂದ, ಇಕ್ಬಾಲ್ ಪೂಂಜಲಕಟ್ಟೆ ಸಿದ್ದಿಕ್ ಕೃಷ್ಣಾಪುರ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!