janadhvani

Kannada Online News Paper

ಕೆಸಿಎಫ್ ಜುಬೈಲ್ ಸೆಕ್ಟರ್ ಮದೀನ ಯಾತ್ರೆಯೊಂದಿಗೆ ಸಾಮುದಾಯಿಕ ಸಮ್ಮಿಳನದ ಪ್ರಚಾರ

 

ಅನಿವಾಸಿ ಕನ್ನಡಿಗರ ಸುನ್ನೀ ಸಂಘಟನೆಯಾದಂತಹ ಕೆಸಿಫ್ ಜುಬೈಲ್ ಘಟಕ ಮತ್ತು ತೈಬಾ ಉಮ್ರ ಸರ್ವಿಸ್ ಇದರ ಜಂಟಿ ಆಶ್ರಯದಲ್ಲಿ ರಬೀಉಲ್ ಅವ್ವಲ್ ತಿಂಗಳ ಮಹತ್ವದ ಮದೀನ ಝಿಯಾರತ್ ಯಾತ್ರೆ ಕೈಗೊಂಡಿತು.ಈ ಸಂದರ್ಭದಲ್ಲಿ ಮದೀನದ ಮಣ್ಣಿನಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲಾಹು ಅಲೈಹುವಸಲ್ಲಮರ ಜನ್ಮ ದಿನಾಚರಣೆಯ ಅಂಗವಾಗಿ ಬುರ್ದಾ ಆಲಾರ್ಪಣೆ ಮತ್ತು ಮೌಲಿದ್ ಪಾರಾಯಣ ನಡೆಸಲಾಯಿತು ಹಾಗೆಯೇ ಹಲವಾರು ಐತಿಹಾಸಿಕ ಸ್ಥಳಗಳ ಸಂದರ್ಶನ ಮಾಡಲಾಯಿತು. ಹಾಗೆಯೇ ನಬಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರ ಪುಣ್ಯ ಕೇಶ ಮತ್ತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಪಯೋಗಿಸಿದ್ದಂತಹ ಇನ್ನಿತರ ವಸ್ತುಗಳ ಝಿಯಾರತ್ ಕೂಡ ಮಾಡಲಾಯಿತು.ಮದೀನದ ಮೂಲೆಗಳಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಲು ಫಾರೂಖ್ ನಯೀಮಿ ಮದೀನ ಜೊತೆಯಲ್ಲಿ ಮುಖ್ಯ ಪಾತ್ರ ವಹಿಸಿ ಸಹಕರಿಸಿದರು.
ಮದೀನಾ ಪ್ರವಾಸದ ಅಂಗವಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವಂತಹ ಗ್ರಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ನ ಸಾಮುದಾಯಿಕ ಸಮ್ಮಿಳನದ ಪ್ರಾಚಾರ ನಡೆಸಲಾಯಿತು.
ಯಾತ್ರೆಯಲ್ಲಿ ಐ ಎನ್ ಸಿ ಮತ್ತು ರಾಷ್ಟ್ರೀಯ ನೇತಾರರಾದಂತಹ ಕಮರುದ್ದೀನ್ ಗೂಡಿನಬಳಿ, ಅಝೀಝ್ ಸ’ಅದಿ ಕುಡ್ತಮೊಗೆರು ಮತ್ತು ಆಸಿಫ್ ಗೂಡಿನಬಲಿ ಹಾಗೂ ಜುಬೈಲ್ ಸೆಕ್ಟರ್ ಮತ್ತು ಯುನಿಟ್’ನ ನೇತಾರರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು .

error: Content is protected !! Not allowed copy content from janadhvani.com