ಪುತ್ತೂರು; ಖುರ್-ಆನಿನ ಪ್ರಕಾಶವನ್ನು ಕಣ್ಣ ಮುಂದೆ ವ್ಯಕ್ತವಾಗುವಂತೆ ಸ್ಪಷ್ಟ ಶೈಲಿಯಲ್ಲಿ ವ್ಯಕ್ತಪಡಿಸುವ ಮೂಲಕ ಇಂದು ಕೇರಳ ಮತ್ತು ವಿವಿಧ ರಾಜ್ಯಗಳಲ್ಲಿ ಪ್ರಸಿಧ್ದಿಯನ್ನು ಪಡೆದಿರುವ ಹಾಗೂ ಸಾಮಾಜಿಕ ತಾಣಗಳಲ್ಲಿ ನಿರಂತರವಾಗಿ ಯುವಕರನ್ನು ಕೇಳುಗರನ್ನಾಗಿಸಿ ಮಂತ್ರ ಮುಗ್ಧಗೊಳಿಸುವಲ್ಲಿ ಯಶಸ್ವಿಯಾದ ಪ್ರಭಾಷಣ ಲೋಕದ ಕಿರೀಟವೇ ಹಾಫಿಲ್ ಮಸ್ಹೂದ್ ಸಖಾಫಿ ಗೂಡಲ್ಲೂರ್
ಉಸ್ತಾದರ ಪ್ರಭಾಷಣದ ತುಣುಕುಗಳಾಗಿವೆ ಇಂದು ಅತೀ ಹೆಚ್ಚು ಯುವಕರು ತಮ್ಮ ಮೊಬೈಲ್ ಗಳಲ್ಲಿ ಕೇಳುತ್ತಿರುವುದೆಂದರೆ ಅತಿಶಯೋಕ್ತಿಯಾಗದು.ಕೇಳಿದರೆ ಮತ್ತೆ ಮಗದೊಮ್ಮೆ ಕೇಳಬೇಕೆಂಬ ಹಂಬಲ,ಆವೇಶ ಉಸ್ತಾದರ ಪ್ರಭಾಷಣದ ವಿಶೇಷತೆಯಾಗಿದೆ.
ಉಸ್ತಾದರು ಕಬಕ ಟೌನ್ ಗೆ ಬರುವ ವಿಚಾರವಂತೂ ಕೇಳಿ ಕಾರ್ಯಕರ್ತರೂ,ಊರಿನ ಗಣ್ಯರೂ,ಹಿರಿಯರೂ ಆವೇಶ ಭರಿತರಾಗಿದ್ದಾರೆ. ಯೌವ್ವನ ಕಾಲಕ್ಕೆ ಕುರ್-ಆನಿನ ಸಂದೇಶವನ್ನು ಕೇಳಲು, ಕೇಳಿ ಜೀವನದಲ್ಲಿ ಪಾಲಿಸಲು ಹಾಫಿಲ್ ಮಸ್ಹೂದ್ ಸಖಾಫಿ ಉಸ್ತಾದರ ಪ್ರಭಾಷಣ ಸಕಾಲಿಕ ಸನ್ನಿವೇಶದಲ್ಲಿ ಬದಲಾವಣೆಯ ಮನಸ್ಥಿತಿಯನ್ನೂ ರೂಪಿಸುವಲ್ಲಿ ಯಶಸ್ವಿಯಾಗುವುದು ಎಂಬುವುದು ನಿಸ್ಸಂದೇಹ
ಅಲ್ಲಾಹು ಯಶಸ್ವಿಯಾಗಿಸಲಿ.
ಆಮೀನ್.
ಜೊತೆಗೆ ಕಬಕ ಊರಿನ ಆತ್ಮೀಯ ಸಾತ್ವಿಕ ನೆರಳು ಮುಹಮ್ಮದ್ ಮದನಿ( ಕಬಕ ಉಸ್ತಾದ್),ಅಹ್ಲ್ ಭೈತಿನ ಧ್ರುವತಾರೆ ಮುಹಮ್ಮದ್ ತಂಙಲ್ ಕಬಕ, ದಾರುಲ್ ಇರ್ಷಾದ್ ಶಿಲ್ಪಿ ಕರ್ನಾಟಕ ರಾಜ್ಯ ಜಂಯಿಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯೀಲ್ ಸಖಾಫಿ ಕೊಡಂಗೇರಿ, ದ.ಕ ಜಿಲ್ಲಾಧ್ಯಕ್ಷರಾದ ಸಿರಾಜುಧ್ದೀನ್ ಸಖಾಫಿ ಕನ್ಯಾನ ಮೊದಲಾದ ಗಣ್ಯರ ದಂಡೇ ಕಬಕ ಟೌನ್ ಗೆ ಇದೇ ಬರುವ 15ನೇ ತಾರೀಖು ಸೋಮವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ ಯೌವ್ವನ ಮರೆಯಾಗುವ ಮುನ್ನ ಎಂಬ ಸಂದೇಶದಡಿಯಲ್ಲಿ ಒಂದು ಗೂಡುವಾಗ ನಾನು ಬರುವೆನು, ನೀವೂ ಬನ್ನಿ, ನಿಮ್ಮ ಮನೆಯವರನ್ನೂ ಕರೆತನ್ನಿ.
ರಾಫಿ ನಗರ