ಸುರತ್ಕಲ್:ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಚುನಾವಣಾ ಕಾರ್ಯಾಗಾರವು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷ ಆರಿಫ್ ಝುಹ್ರಿ ಮುಕ್ಕ ರವರ ಆದ್ಯಕ್ಷತೆಯಲ್ಲಿ ಮಿಸ್ಬಾಹ್ ಕಾಲೇಜು ಸಭಾಂಗಣ ಕಾಟಿಪಳ್ಳದಲ್ಲಿ ನಡೆಯಿತು.
ನಾಸಿರ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ತರಗತಿ ನಡೆಸಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಚುನಾವಣಾ ಪ್ರಕ್ರಿಯೆಯ ಕುರಿತು ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯರಾದ ಇಕ್ಬಾಲ್ ಮಂಗಳಪೇಟೆ,ರಪೀಕ್ ಸುರತ್ಕಲ್,ಜಿಲ್ಲಾ ನಿಕಟಪೂರ್ವ ಕ್ಯಾಂಪಸ್ ಕಾರ್ಯದರ್ಶಿ ಆಸಿಫ್ ಹಾಜಿ ಕೃಷ್ಣಾಪುರ,ಫಾರೂಖ್ ಸಖಾಫಿ,ಹಸನ್ ಝುಹ್ರಿ,ಹೈದರ್ ಮದನಿ,ಫಾರೂಕ್ ಅಹ್ಸನಿ,ಫಾರೂಕ್ ಶೇಡಿಗುಡಿ,ಹರ್ಷಾದ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ತನ್ಶೀರ್ ಸ್ವಾಗತಿಸಿ,ಕೊನೆಗೆವಂದಿಸಿದರು.