ಕಕ್ಯಪದವಿನ ನಿಷ್ಕಳಂಕ ಮನಸ್ಸಿನ ಯುವಕರ ವಾಟ್ಸಪ್ ಗ್ರೂಪ್ ಆದ “ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್” ಹಲವಾರು ವರ್ಷಗಳಿಂದ ಆರ್ಥಿಕ ವಾಗಿ ಹಿಂದುಳಿದ ಬಡ ಜನರ ಕಷ್ಟಗಳಿಗೆ ಸ್ಪಂದಿಸಿ ವಾಟ್ಸಪ್ ಗ್ರೂಪ್ ಮೂಲಕ ನಿಷ್ಕಳಂಕ ಮನಸ್ಸಿನ ಸದಸ್ಯರು ಸಮಾಹರಿಸುವ ಧನ ಸಹಾಯದ ಫಲವಾಗಿ ಬಡಜನರ ಆಸರೆಯಾಗುವುದರಿಂದ ದೇಶ ವಿದೇಶಗಳಲ್ಲಿ ಜನಮನ್ನಣೆ ಗಳಿಸಿದೆ.
ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಕಕ್ಯಪದವು ಜಮಾಹತಿಗೆ ಒಳಪಟ್ಟಂತಹ ಹೆಣ್ಣಿನ ಮದುವೆ ಕಾರ್ಯಕ್ರಮಕ್ಕೆ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪಿನ ಉದಾತ್ತ ದಾನಿಗಳಾದ ಸದಸ್ಯರಿಂದ ಶೇಖರಿಸಲ್ಪಟ್ಟ ಅಲ್ಪ ಮೊತ್ತವನ್ನು ಗ್ರೂಪ್ ಅಡ್ಮಿನ್ ಗಳಾದ ಅನ್ವರ್ ಮಜ್ಜಿಗುಡ್ಡೆ, ಸ್ವಾದಿಖ್ ಸಖಾಫಿ ಪೇರಳಗುಲಿ, ಹಾಗೂ ಸದಸ್ಯರಾದ ಡ್ರೈವರ್ ಇಸ್ಮಾಯಿಲ್ ಕಕ್ಯಪದವು, ರವರ ಮುಖಾಂತರ ಸಂಬಂಧಪಟ್ಟವರಿಗೆ ನೀಡಲಾಯಿತು.