ರಿಯಾದ್: ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಜಮಾಅತ್ ಗೊಳಪಟ್ಟ ಅನಿವಾಸಿಗಳ ಸಂಘಟನೆಯಾದ ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ (UDC) ರಿಯಾದ್ ಸೌದಿ ಅರೇಬಿಯಾ ಇದರ ಎರಡನೇ ವಾರ್ಷಿಕ ಮಹಾಸಭೆಯು ದಿನಾಂಕ 05.10.2018 ಶುಕ್ರವಾರ ಬೆಳಿಗ್ಗೆ ದಾರುಲ್ ಫಲಾಹ್ ರಬುವ ರಿಯಾದ್ನಲ್ಲಿ ಸಾಮಾಜಿಕ ಮುಂದಾಳು KCF ಮುಖಂಡ ಅಬ್ದುಲ್ ರಝಾಖ್ ಹಾಜಿ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಜರಗಿತು,
PKM ಹನೀಫ್ ಉರುವಾಲು ಪದವು ಆರಂಭದಲ್ಲಿ ಸ್ವಾಗತಿಸಿದರು. ಇಸ್ಹಾಖ್ ಮದನಿ ಪದವು ಖಿರಾಅತ್ ಪಠಿಸಿದರು. PK ಯಾಕುಬ್ ಮದನಿ ಉರುವಾಲು ಪದವು ಕಾರ್ಯಕ್ರಮ ಉದ್ಘಾಟಿಸಿದರು. PK ಸಿದ್ದೀಖ್ ಉರುವಾಲು ಪದವು ವಾರ್ಷಿಕ ವರದಿ ಹಾಗೂ UP ನಾಸಿರ್ ಉರುವಾಲು ಪದವು ಆಯವ್ಯಯ ಲೆಕ್ಕ ಪತ್ರ ಮಂಡಿಸಿದರು. PK ದಾವೂದ್ ಸ’ಅದಿ ಉರುವಾಲು ಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು.
2018 – 19 ರ ಸಾಲಿನ ನೂತನ ಸಮಿತಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು.
ಅಬ್ದುಲ್ ರಝಾಖ್ ಹಾಜಿ ಉಜಿರೆ (ಗೌರವಾಧ್ಯಕ್ಷರು)
PK ಯಾಕುಬ್ ಮದನಿ ಉರುವಾಲು ಪದವು,ಅಬ್ದುಲ್ ಲತೀಫ್ ಉರುವಾಲು ಪದವು, ( ಸಲಹಾ ಸಮಿತಿ ಸದಸ್ಯರು)
PK ದಾವೂದ್ ಸಅದಿ ಉರುವಾಲು ಪದವು (ಅಧ್ಯಕ್ಷರು)
UPಇಸ್ಹಾಖ್ ಮದನಿ ಉರುವಾಲು ಪದವು, PKM ಹನೀಫ್ ಉರುವಾಲು ಪದವು (ಉಪಾಧ್ಯಕ್ಷರು)
PKM ಆಸಿಪ್ ಉರುವಾಲುಪದವು ( ಪ್ರಧಾನ ಕಾರ್ಯದರ್ಶಿ) UP ನೌಮಾನ್ ಉರುವಾಲು ಪದವು, PK ಸಿದ್ದೀಖ್ ಉರುವಾಲು ಪದವು ( ಜೊತೆ ಕಾರ್ಯದರ್ಶಿಗಳು)
UP ನಾಸಿರ್ ಉರುವಾಲು ಪದವು (ಕೋಶಾಧಿಕಾರಿ)
ಮುಹಮ್ಮದ್ ಶೆರೀಫ್ ಉರುವಾಲು ಪದವು ( ಸಂಘಟನಾ ಕಾರ್ಯದರ್ಶಿ)
ನೂತನ ಕಾರ್ಯದರ್ಶಿ PKM ಆಸಿಪ್ ಉರುವಾಲು ಪದವು ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಸಭೆಯಲ್ಲಿ ಸಭಾಧ್ಯಕ್ಷರೂ ನೂತನ ಗೌರವಾಧ್ಯಕ್ಷರೂ ಆದ ಅಬ್ದುಲ್ ರಝಾಖ್ ಹಾಜಿ ಉಜಿರೆ ಯವನ್ನು
ಶಾಲು ಹೊದಿಸಿ ಗೌರವಿಸಲಾಯಿತು.