janadhvani

Kannada Online News Paper

ಕೆಸಿಎಫ್ ಮದೀನಾ ಮುನವ್ವರ: ಹಜ್ಜ್ ಸ್ವಯಂ ಸೇವಕರಿಗೆ ಅಭಿನಂದನಾ ಸಭೆ

ಮದೀನಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಸೆಕ್ಟರ್ ವತಿಯಿಂದ ‘ಹಜ್ 2018’ 71 ದಿವಸಗಳ ಕಾಲ ಮದೀನದಲ್ಲಿ ಹಜ್ಜ್ ಸ್ವಯಂ ಸೇವಕರಾಗಿ ಕಾರ್ಯಾಚರಿಸಿದ HVC ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ ನಡೆಸಲಾಯಿತು.ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟಕರಾಗಿ ಆಗಮಮಿಸಿದ ಉಮರ್ ಸಖಾಫಿ ಪರಪ್ಪು ಹಜ್ಜ್ ಸೇವೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ನಾಯಕರನ್ನು ಹಾಗೂ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಕ್ಕಾ ಹಾಗೂ ಮದೀನಾ ಮುನವ್ವರದಲ್ಲಿ ಹಜ್ಜ್ ಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಫಲಕ ನೀಡಿ ಗೌರವಿಸಲಾಯಿತು.

ಮದೀನಾ ಮುನವ್ವರ ಝೋನ್ ಅಧ್ಯಕ್ಷ ಫಾರೂಖ್ ನಈಮಿ ಸರಳಿಕಟ್ಟೆ ಪ್ರಸ್ತಾವಿಕ ಭಾಷಣ ಮಾಡಿ, ಸುಲೈಮಾನ್ ಸಖಾಫಿ ಕೊಡಗು ಸಭೆಗೆ ಶುಭಾಶಯ ಕೋರಿದರು. ಉಮರ್ ಗೇರುಕಟ್ಟೆ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮಕ್ಕೆ ಅಬೂಬಕ್ಕರ್ ಉದ್ದಬೆಟ್ಟು ದನ್ಯವಾದಗೈದರು.

error: Content is protected !! Not allowed copy content from janadhvani.com