janadhvani

Kannada Online News Paper

ಹಯಾತುಲ್ ಇಸ್ಲಾಂ ಮದ್ರಸ ಉಜಿರೆ ನೂತನ ಕಟ್ಟಡ ಉದ್ಘಾಟನೆ

ಉಜಿರೆ: ಬದ್ರಿಯಾ ಜುಮಾ ಮಸೀದಿ,ಟೌನ್, ಉಜಿರೆ  ಇದರ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ಇದರ ನೂತನ ಕಟ್ಟಡ ಉದ್ಘಾಟನೆಯು ದಿನಾಂಕ 09/09/2018 ನೇ ಅದಿತ್ಯವಾರ ನಡೆಯಿತು.ಅಸ್ಸಯ್ಯದ್ ಮುಹಮ್ಮದ್ ಮೆಹರಾಜ್ ತಂಙಳ್ ಮದ್ರಸವನ್ನು ಉದ್ಘಾಟಿಸಿದರು. ಅಸ್ಸಯ್ಯದ್ ಇಸ್ಮಾಯಿಲ್ ತಂಙಳ್,ಉಜಿರೆ ದುಃವಾ ನೇತೃತ್ವವನ್ನು ವಹಿಸಿದ್ದರು.


ಸಮಾರಂಭ ಕಾರ್ಯಕ್ರಮವನ್ನು ಉಜಿರೆ ಕೇಂದ್ರ ಜುಮಾ ಮಸೀದಿಯ ಖತೀಬರಾದ ಬಹು|ಅಬ್ಬಾಸ್ ಮದನಿಯವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು BJM ಅಧ್ಯಕ್ಷರಾದ ಅಬ್ದುರ್ರಹ್ಮಾನ್ ART ರವರು ವಹಿಸಿದ್ದರು.


SJM ಉಜಿರೆ ರೇಂಜ್ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ,ಮುಂಡಾಜೆ ಪ್ರಸ್ತಾವಿಕ ಭಾಷಣವನ್ನು ಮಾಡಿದರು.
ವೇದಿಕೆಯಲ್ಲಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಬಿ.ಎಂ.ಹಮೀದ್, ಮುಸ್ತಾಕ್ ತಂಙಳ್ ಉಜಿರೆ,BJM ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಬಶೀರ್ ಅಪ್ನಿ, ಕೋಶಾಧಿಕಾರಿಯಾದ ಮಹಮ್ಮದ್ ತಾಜ್,ಯಂಗ್ ಮೆನ್ಸ್ ಅಧ್ಯಕ್ಷರಾದ ತಮೀಮ್,ಕಾರ್ಯದರ್ಶಿಯಾದ U.A ಸಹದಾನ್,SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್,ಖ್ಯಾತ ಪತ್ರಕರ್ತರಾದ ಅಶ್ರಫ್ ಅಲಿಕುಞಿ ಮುಂಡಾಜೆ ಉಪಸ್ಥಿತಿಯಿದ್ದರು.
ಹಳೆವಿಧ್ಯಾರ್ಥಿಗಳು,ಮದ್ರಸ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
BJM ಖತೀಬರಾದ ಮಹಮ್ಮದ್ ಅಶ್ರಫ್ ಹಿಮಮಿ ಸ್ವಾಗತಿಸಿದರು. ಕೊನೆಯಲ್ಲಿ BJM ಮುಅಲ್ಲಿಂರಾದ ಅಬುಬಕ್ಕರ್ ಸಿದ್ದಿಕ್ ಝೈನಿ ವಂದಿಸಿದರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com