ಮನ್-ಶರ್ ಗ್ರೂಪ್ ಇದರ ಅಧೀನ ಸಂಸ್ಥೆಗಳ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮನ್-ಶರ್ ಆಂಗ್ಲ ಮಾಧ್ಯಮ ಶಾಲೆ ಗೇರುಕಟ್ಟೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.18ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಗೋಪಾಲಕ್ರಷ್ಣ ಕಾಂಚೋಡ್ ರವರು ಧ್ವಜಾರೋಹನವನ್ನು ನೆರವೇರಿಸಿ ದೇಶ ಕಟ್ಟುವಲ್ಲಿ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರ ಪಾತ್ರಗಳ ಕುರಿತು ಸಂದೇಶವನ್ನು ನೀಡಿ ಶುಭಹಾರೈಸಿದರು.
ಮನ್-ಶರ್ ಗ್ರೂಪ್ ಮ್ಯಾನೇಜಿಂಗ್ ಡೈರಕ್ಟರ್ ಹಾಗೂ ಸಂಚಾಲಕರಾದ ಸಯ್ಯದ್ ಉಮರ್ ಅಸ್ಸಖಾಫ್ ಮಾತನಾಡಿ ವೈವಿಧ್ಯತೆಯನ್ನು ಹೊಂದಿರುವ ದೇಶದ ಸಂಸ್ಕ್ರತಿ,ಆಚಾರ ವಿಚಾರಗಳನ್ನು ಸ್ಮರಿಸಿ ಸ್ವಾತಂತ್ರ್ಯ ಸಂಭ್ರಮದ ಸಂದೇಶವನ್ನು ನೀಡಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ನಿವ್ರತ್ತ ಭಾರತೀಯ ಡೈರಿ ಸಂಸ್ಥೆಯ ಸದಸ್ಯರೂ ಆದ ಡಾ.ಪಿ.ಕೆ ಶ್ರೀವಾಸ್ತವ,ಸ್ಕೂಲ್ ಮ್ಯಾನೇಜರ್ ಸಯ್ಯದ್ ಆಬಿದ್ ಅಸ್ಸಖಾಫ್, ಕಾರ್ಯದರ್ಶಿಗಳಾದ ಸಾಧಿಕ್ ಮಲೆಬೆಟ್ಟು, ಮನ್-ಶರ್ ಅಕಾಡೆಮಿ ಶಿಕ್ಷಣ ಸಂಯೋಜಕರು ವಸಂತ್ ಕುಮಾರ್ ನಿಟ್ಟೆ, ಮನ್-ಶರ್ ಸಿಧ್ರಾ ಪ್ರಾಂಶುಪಾಲರಾದ ಅಡ್ವಕೇಟ್ ಉಬೈದ್ ಸುರೈಜ್ ಸಖಾಫಿ,ಮನ್-ಶರ್ ಪ್ಯಾರಾಮೆಡಿಕಲ್ ನ ಪ್ರಾಂಶುರಾಲರಾದ ಹೈದರ್ ಮರ್ಧಾಲ,ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಲಂದರ್ ಪದ್ಮುಂಜ, ಫೆಮಿನಕ್ಸ್ ಉಸ್ತುವಾರಿ ನಝೀರ್ ಅಹ್ಸನಿ,ಕ್ಯಾಂಪಸ್ ಉಸ್ತುವಾರಿ ರಶೀದ್ ಕುಪ್ಪೆಟ್ಟಿ, ನ್ಯೂಬಿ ಪ್ರೀ ಸ್ಕೂಲ್ ಕೋರ್ಡಿನೇಟರ್ ನೌಫಲ್ ಸಹಿತ ವಿವಿಧ ವಿಭಾಗಗಳ ಸಂಯೋಜಕರು,ಶಿಕ್ಷಕ ಮತ್ತು ಶಿಕ್ಷಕೇತರ ವ್ರಂಧ ,ಪೋಷಕರು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವವನ್ನು ಮನ್-ಶರ್ ಫೆಮಿನಕ್ಸ್ ಝೋನ್ ಪ್ರಾಂಶುಪಾಲರಾದ ಬಲ್ಕೀಸ್ ನಿರೂಪಿಸಿದರು. ನರ್ಸರಿ ವಿಭಾಗದ ಸಂಯೋಜಕಿ ಮುಮ್ತಾಝ್ ಸ್ವಾಗತಿಸಿ ಮನ್-ಶರ್ ಸ್ಕೂಲ್ ಸಂಯೋಜಕಿ ಉಷಾ ವಂಧಿಸಿದರು.