janadhvani

Kannada Online News Paper

ಸೌದಿ: ಆಗಸ್ಟ್ 20 ಕ್ಕೆ ಅರಫಾ ದಿನ, 21ಕ್ಕೆ ಈದುಲ್ ಅದ್’ಹಾ

ರಿಯಾದ್: ಸೌದಿ ಅರೇಬಿಯಾ ದಲ್ಲಿ ಶನಿವಾರ ದುಲ್ ಹಜ್ ತಿಂಗಳ ಚಂದ್ರ ದರ್ಶನವಾಗಿರುವುದಾಗಿ ಸೌದಿ ಸುಪ್ರಿಂಕೋರ್ಟ್ ತಿಳಿಸಿದೆ.

ಇದರನ್ವಯ  ಹಜ್ ಕರ್ಮದ ಪ್ರಮುಖ ಅಂಶವಾಗಿರುವ ಅರಫಾ ದಿನವು  ಆಗಸ್ಟ್ 20ಕ್ಕೆ ಮತ್ತು 21ಕ್ಕೆ ಈದುಲ್ ಅದ್’ಹಾ ಆಗಿರುತ್ತದೆ ಎಂದು ಸೌದಿ ಅವ್ಖಾಫ್ ವ್ಯಕ್ತಪಡಿಸಿದೆ.ಪ್ರಸಿದ್ಧ ಖಗೋಳ ತಜ್ಞ ಅಬ್ದುಲ್ಲಾಹ್ ಖುಲೈರಿ ಸೇರಿ ನಾಲ್ಕು ಮಂದಿ ಸೌದಿಯ ಸುದೈಸ್ ನಲ್ಲಿ ಚಂದ್ರ ದರ್ಶಿಸಿರುವುದಾಗಿ ಅರಬ್ ಪೋರ್ಟಲ್ ಸಬ್ಖ್ ವರದಿ ಮಾಡಿದೆ.

ಆಗಸ್ಟ್ 16 ರಿಂದ 26 ವರೆಗೆ ಈದುಲ್ ಅದ್ ಹಾ ರಜೆಯಾಗಿರುತ್ತದೆ.

error: Content is protected !! Not allowed copy content from janadhvani.com