ಅಕ್ರಮ ವಲಸಿಗರಿಗಾಗಿ ತಪಾಸಣೆ: ಅಂಖಾರಾದಲ್ಲಿ 1024 ಮಂದಿ ಸೆರೆ

ಕುವೈತ್ ನಗರ: ದೇಶದಲ್ಲಿ ಅಕ್ರಮ ವಲಸಿಗರಿಗಾಗಿ ನಡೆದ ತಪಾಸಣಾ ವೇಳೆ ಅಂಖಾರಾದಲ್ಲಿ 1024 ಮಂದಿಗಳನ್ನು ಸೆರೆಹಿಡಿಯಲಾಗಿದೆ.

ತಪ್ಪಿಸಿಕೊಳ್ಳುವ ಎಲ್ಲಾ ಹಾದಿಗಳನ್ನು ತಡೆದು ನಡೆಸಿದ ದಾಳಿಯಲ್ಲಿ 43 ತಲೆಮರೆಸಿಕೊಂಡವರು ಮತ್ತು ಪ್ರಾಯೋಜಕರಿಂದ ತಪ್ಪಿಸಿಕೊಂಡವರನ್ನು ಬಂಧಿಸಲಾಯಿತು, ಅದರಲ್ಲಿ ಭಾರತೀಯರೂ ಒಳಗೊಂಡಿದ್ದಾರೆ.

ಗೃಹ ಸಚಿವಾಲಯದ ನೇರ ಮೇಲ್ವಿಚಾರಣೆಯಲ್ಲಿ ಸಹಾಯಕ ಜನರಲ್ ಲೆಫ್ಟಿನೆಂಟ್ ಜನರಲ್ ಇಸಾಮ್ ಅಲ್ ನಹಾಮ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು.ಈ ಮಧ್ಯೆ, ಗುರುತಿನ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಒಟ್ಟು 280 ಜನರನ್ನು ಗಡಿಪಾರು ಕೇಂದ್ರಕ್ಕೆ ವರ್ಗಾಯಿಸಲಾಯಿತು ಮತ್ತು 744 ಜನರನ್ನು ಬಿಡುಗಡೆ ಮಾಡಲಾಯಿತು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ರಮ ವಲಸಿಗರಿಗಾಗಿನ ಮಿಂಚಿನ ಕಾರ್ಯಾಚರಣೆಗಳು ಕಟ್ಟುನಿಟ್ಟಾಗಿ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.

ಏತನ್ಮಧ್ಯೆ, ತಪ್ಪಿಸಿಕೊಂಡಿರುವುದಾಗಿ ತಿಳಿಸಿ 12,800 ದೂರುಗಳನ್ನು ಈ ವರ್ಷ ಉದ್ಯೋಗದಾತರು ಮ್ಯಾನ್ ಪವರ್ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಜೊತೆಗೆ, 244 ವಿವಿಧ ದೇಶದ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದ ನಂತರ ವಾಸ ಇಖಾಮ ರದ್ದು ಪಡಿಸಿ ದೇಶ ತೊರೆದಿದ್ದಾರೆ ಎಂದು  ಎಂದು ಮ್ಯಾನ್ ಪವರ್ ಅಥಾರಿಟಿಯ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಅಲ್ ಮಾರಿ ಹೇಳಿದರು

ಈ ಪ್ರಕರಣಗಳ ಪೈಕಿ 4315 ದೂರುಗಳನ್ನು ಪವರ್ ಅಥಾರಿಟಿಗೆ ಬಗೆಹರಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಮಾನವ ಹಕ್ಕುಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಥಾರಿಟಿಯ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!