janadhvani

Kannada Online News Paper

ಏರ್ ಇಂಡಿಯಾ ಎಕ್ಸ್ ಪ್ರೆಸ್: 20 ಕೆ.ಜಿ ಲಗೇಜ್ ಆಯ್ಕೆಗೆ ದರ ಕಡಿತ ಆಫರ್

ಅಬುಧಾಬಿ: ಗಲ್ಫ್ ಪ್ರದೇಶಗಳಿಂದ ಭಾರತದ ವಿವಿಧ ಕಡೆಗಳಿಗೆ ಸೇವೆಗೈಯುತ್ತಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನಲ್ಲಿ ಯಾತ್ರಿಕರು 20 ಕೆ.ಜಿ. ಲಗೇಜ್ ಆಯ್ದುಕೊಳ್ಳುವ ಸೌಲಭ್ಯವನ್ನು ಒದಗಿಸಿದೆ.

ಪ್ರತೀ ಪ್ರಯಾಣಿಕರು ಸಾಮಾನು 30 ಕಿಲೋಗ್ರಾಮ್ ಕೊಂಡೊಯ್ಯಬಹುದಾಗಿದೆ, ಆದರೆ 20 ಕಿ.ಗ್ರಾಂ ಆಯ್ಕೆ ಮಾಡುವ ಪ್ರಯಾಣಿಕರಿಗೆ 50 ದಿರ್ಹಂಮನ್ನು ಟಿಕೆಟ್ನಲ್ಲಿ ಕಡಿಮೆಗೊಳಿಸಲಾಗುತ್ತವೆ.ನಿನ್ನೆಯಿಂದ ಹೊಸ ಸೌಲಭ್ಯ ದೊರೆಯುತ್ತಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿದೆ.

ಹೊಸ ವ್ಯವಸ್ಥೆಯು ಕಡಿಮೆ ಲಗೇಜ್ ಹೊಂದಿರುವ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಗಲ್ಫ್ ಪ್ರದೇಶದ ಎಲ್ಲಾ ಸೇವೆಗಳಿಗೆ ಹೊಸ ದರಗಳು ಅನ್ವಯವಾಗುತ್ತವೆ. ಏರ್ ಇಂಡಿಯಾವು ಗಲ್ಫ್ ಪ್ರದೇಶದಲ್ಲೇ ಮೊದಲ ಪ್ರಯೊಗವನ್ನು ಪರಿಚಯಿಸಿದೆ.ನಿರಂತರ ಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನ ಈ ಯೋಜನೆಯು ಬಹಳ ಉಪಯುಕ್ತ ಆಯ್ಕೆಯಾಗಿದೆ.

ಕಡಿಮೆ ದರದಲ್ಲಿ ಉತ್ತಮ ಸೇವೆಯೊಂದಿಗೆ ಯಾತ್ರೆ ಕೈಗೊಳ್ಳಲು ಏರ್ ಇಂಡಿಯಾ ಎಕ್ಸ್ ಪ್ರೆಸ್ ಏಕೈಕ ಆಯ್ಕೆಯಾಗಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com